ಹಾನಿಯ ಬಗ್ಗೆ ಸಂಜೆಯೊಳಗೆ ವರದಿ ನೀಡಲು ಸೂಚನೆ
ಎರಡು ಬಾರಿ ಭೂಕಂಪನ ಉಂಟಾಗಿ ಮನೆಗಳು ಬಿರುಕು ಬಿಟ್ಟಿರುವ ಸಂಪಾಜೆ ಗ್ರಾಮದ ಕಲ್ಲುಗುಂಡಿ, ಗೂನಡ್ಕ ಪ್ರದೇಶಗಳಿಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ಜೂ.30 ರಂದು ಭೇಟಿ ನೀಡಿದರು. ಮನೆ ಬಿರುಕು ಉಂಟಾಗಿರುವ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿ.ಆರ್.ನಾಗೇಶ ಅವರ ಮನೆಗೆ ಹಾಗು ಗ್ರಾಮ ಪಂಚಾಯತ್ ಹಾಲಿ ಸದಸ್ಯ ಅಬೂಸಾಲಿ ಅವರ ಮನೆಗೆ
ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಮನೆಗಳಿಗೆ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿ ಇಂದು ಸಂಜೆಯ ಒಳಗೆ ವರದಿ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಮತ್ತು ಇಂಜಿನಿಯರ್ಗಳಿಗೆ ಸಚಿವರು ಆದೇಶ ನೀಡಿದರು.
ವರದಿ ಆಧರಿಸಿ ಹಾನಿ ಸಂಭವಿಸಿದ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು. ಜನರು ಆತಂಕ ಪಡುವ ಅಗತ್ಯ ಇಲ್ಲ. ಭೂ ಕಂಪನ ಆಗಿರುವ ಪ್ರದೇಶಗಳಲ್ಲಿ ಸೂಕ್ತ ಅಧ್ಯಯನ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಂಗಾರರು ಹೇಳಿದರು. ಅಗತ್ಯ ಮುಂಜಾಗೃತಾ ಕ್ರಮ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತಹಶೀಲ್ದಾರ್ ಅನಿತಾಲಕ್ಷ್ಮಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಗ್ರಾಮ ಕರಣಿಕ ಮಿಯಾ ಸಾಬ್ ಮುಲ್ಲಾ, ವಿವಿಧ ಇಲಾಖಾ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ ರೈ, ಎಸ್.ಕೆ.ಹನೀಫ, ಪಿ.ಕೆ.ಅಬೂಸಾಲಿ, ರಜನಿ ಶರತ್, ಪ್ರಮುಖರಾದ ಗಣಪತಿ ಭಟ್, ಎಸ್.ಪಿ.ಲೋಕನಾಥ್, ಚಂದ್ರಶೇಖರ, ಶಿವಾನಂದ ಕುಕ್ಕುಂಬಳ, ರಹೀಂ ಬೀಜದಕಟ್ಟೆ, ಇ.ವಿ.ಪ್ರಶಾಂತ್, ಕೇಶವ ಬಂಗ್ಲೆಗುಡ್ಡೆ,ವಿಜಯ ಆಲಡ್ಕ, ವರದರಾಜ ಸಂಕೇಶ್, ಶಾಜಿ ಮಾಧವನ್, ಸಚಿವರ ಆಪ್ತ ಕಾರ್ಯದರ್ಶಿಗಳಾದ ಎ.ಜಿ.ಸುಧಾಕರ, ಸಂಜೀವ
ಮತ್ತಿತರರು ಉಪಸ್ಥಿತರಿದ್ದರು.