ಮತ್ತೆ ವಾಹನ ಅಪಘಾತ ಪ್ರದೇಶವಾದ ಮಾವಿನಕಟ್ಟೆ ತಿರುವು ರಸ್ತೆ
ಬೊಲೆರೊ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಬಳಿ ಜೂ.30ರಂದು ಅಪರಾಹ್ನ ಸಂಭವಿಸಿದೆ.
ಕನಕಮಜಲಿನ ಅಜಿತ್ ಕಾರಿಂಜ ಎಂಬವರು ತಮ್ಮ ಬೊಲೆರೊ ವಾಹನದಲ್ಲಿ ಸುಳ್ಯದಿಂದ ಕನಕಮಜಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಡ್ಕಾರಿನ ಮಾವಿನಕಟ್ಟೆ ಬಳಿ ಸುರಿವ ಬಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಚಾಲಕ ಅಜಿತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಬೊಲೆರೊ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.
ಅಡ್ಕಾರಿನ ಮಾವಿನಕಟ್ಟೆಯ ಇದೇ ಪರಿಸರದಲ್ಲಿ ಕಳೆದ ವಾರ ಕೇರಳ ಕೆ.ಎಸ್.ಆರ್.ಟಿ.ಸಿ. ಮಲಬಾರ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಈ ಪರಿಸರದಲ್ಲಿ ಕಳೆದ ಒಂದೆರಡು ವರ್ಷಗಳ ಹಿಂದೆ ನಿರಂತರವಾಗಿ ರಸ್ತೆ ಅಪಘಾತ ನಡೆಯುತ್ತಿದ್ದು , ಪೊಲೀಸ್ ಬ್ಯಾರಿಕೇಡ್ ಇಡಲಾಗಿತ್ತು. ಆದರೆ ಪ್ರಸ್ತುತ ಪೊಲೀಸ್ ಬ್ಯಾರಿಕೇಡ್ ಇಲ್ಲ. ಇದೀಗ ಈ ಪರಿಸರದ ತಿರುವು ರಸ್ತೆಯು ವಾಹನ ಅಪಘಾತ ಪ್ರದೇಶವಾಗಿದೆ.