Breaking News

ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಬಸವನ ಆರೈಕೆ ಮಾಡಿದ ಯುವಕರ ತಂಡ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಎರಡೂ ಕಾಲುಗಳಿಂದ ರಕ್ತ ಸೋರಿಕೆಯುಂಟಾಗಿ, ಕೈ ಭಾಗದಲ್ಲಿ ಮಾಂಸದ ಗುಳ್ಳೆ ಎದ್ದ ಸ್ಥಿತಿಯಲ್ಲಿದ್ದ ದೇವಸ್ಥಾನದ ಬಸವನನ್ನು ಸ್ಥಳಿಯ ಯುವಕರ ತಂಡ ಆರೈಕೆ ಮಾಡಿದೆ.

 

ಅನಾರೋಗ್ಯದಿಂದ ಬಳಲುತ್ತಿದ್ದ ಬಸವನನ್ನು ಗಮನಿಸಿದ ಬೆಳ್ಳಾರೆ ಸೇವಾಭಾರತಿ ಕಾರ್ಯಕರ್ತರು, ವಿರಾಟ್ ಫ್ರೆಂಡ್ಸ್ ಅಧ್ಯಕ್ಷ ಮನೋಜ್ ರೈ, ಸುಪ್ರಭಾ ಜ್ಯುವೆಲ್ಲರ್ಸ್ ನ ಪ್ರಸಾದ್, ಮಂಜುನಾಥ ಹೆಗಡೆ ತಡಗಜೆ, ತಿಮ್ಮಪ್ಪ ಗೌಡ ಕಾಯಾರ , ಪ್ರೇಮ್ ಬೆಳ್ಳಾರೆ ಮತ್ತಿತರರು ದೇವಸ್ಥಾನದ ಆಡಳಿತಾಧಿಕಾರಿ ಸುಹಾನಾ ಅವರ ಗಮನಕ್ಕೆ ತಂದರೆನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಆಡಳಿತಾಧಿಕಾರಿಯವರು ದೇವಸ್ಥಾನದ ಸಿಬ್ಬಂದಿ ಮಹೇಶ್ ರಿಂದ ಮಾಹಿತಿಯನ್ನು ಪಡೆದುಕೊಂಡು ವೈದ್ಯರ ಮೂಲಕ ಚಿಕಿತ್ಸೆ ನೀಡಿದ್ದಾರೆ. ವಿರಾಟ್ ಫ್ರೆಂಡ್ಸ್ ನ ಅಧ್ಯಕ್ಷ ಮನೋಜ್ ರೈಯವರು ಬಸವನಿಗೆ ನೂತನ ಕೊಟ್ಟಿಗೆ ವ್ಯವಸ್ಥೆಆಗಬೇಕು ಎಂದು ಮನವಿ ಮಾಡಿದರೆನ್ನಲಾಗಿದೆ. ಮುಂದಿನ ದಿನಗಳಲ್ಲಿ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ಹಾಗೂ ಊರಿನ ಪ್ರಮುಖರನ್ನು, ಭಕ್ತಾದಿಗಳನ್ನು, ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದು ಬಸವನ ಆರೈಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಆಡಳಿತಾಧಿಕಾರಿ ಸುಹಾನರವರು ಭರವಸೆ ನೀಡಿದ್ದಾರೆಂದು ಪ್ರೇಮ್ ಬೆಳ್ಳಾರೆ ಪತ್ರಿಕೆಗೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.