Breaking News

ಪೋಲೀಸರಿಲ್ಲದೆ ನಡೆದ ಸುಳ್ಯ ನಗರ ಪಾರ್ಕಿಂಗ್ ಸಮಸ್ಯೆ – ಪರಿಹಾರದ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ವನ್ ಸೈಡ್ ಪಾರ್ಕಿಂಗ್ ಹಳೆಗೇಟಿನವರೆಗೆ ವಿಸ್ತರಣೆಗೆ ಚಿಂತನೆ

ಒಳಾಂಗಣ ಕ್ರೀಡಾಂಗಣದ ಸಮಾಲೋಚನೆ ; ಪ್ರತ್ಯೇಕ ಸಭೆ

 

ಸುಳ್ಯ ನಗರದ ಮುಖ್ಯ ರಸ್ತೆಯ ವಾಹನ ಪಾರ್ಕಿಂಗ್ ಹಾಗೂ ಇನ್ನಿತರ ವಿಚಾರಗಳ ಕುರಿತು ಸಮಾಲೋಚನಾ ಸಭೆ ಸುಳ್ಯ ನ.ಪಂ. ಸಭಾಂಗಣದಲ್ಲಿ ನಡೆಯಿತು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಳ್ಯ ವರ್ತಕರ ಸಂಘ, ರಿಕ್ಷಾ ಯೂನಿಯನ್, ಕಾರು, ಟ್ಯಾಕ್ಸಿ ಮಾಲಕರು, ವ್ಯಾನ್ ಚಾಲಕ ಮಾಲಕರ ಸಂಘದವರು ಭಾಗವಹಿಸಿದ್ದರು. ಪೋಲೀಸ್ ಇಲಾಖೆ, ಕೆ.ಎಸ್.ಆರ್.ಟಿ.ಸಿ. ಇಲಾಖೆಯವರು ಸಭೆಗೆ ಬಂದಿರಲಿಲ್ಲ. ಸಭೆಯಲ್ಲಿ ಏನೇ ಅಭಿಪ್ರಾಯಗಳು ಬಂದರೂ ಅದನ್ನು ಅನುಷ್ಠಾನಕ್ಕೆ ತರಬೇಕಾದವರು ಪೋಲೀಸರು ಆದುದರಿಂದ ಅವರೇ ಬಾರದಿದ್ದರೆ ಈ ಸಭೆ ಮಹತ್ವ ಪಡೆದುಕೊಳ್ಳುವುದಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.


ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕರು, ಸುಳ್ಯ ನಗರದ ಪಾರ್ಕಿಂಗ್‌ನ್ನು ಇನ್ನಷ್ಟು ಸರಿಪಡಿಸುವ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಕ್ಕಾಗಿ ಸಭೆಯನ್ನು ಕರೆಯಲಾಗಿದೆ” ಎಂದು ಹೇಳಿದರು.
ವರ್ತಕರ ಸಂಘದ ಅಧ್ಯಕ್ಷರು ಅಭಿಪ್ರಾಯ ವ್ಯಕ್ತ ಪಡಿಸಿ, “ಈಗ ವನ್ ಸೈಡ್ ಪಾರ್ಕಿಂಗ್ ಮಾಡಿರುವ ಕ್ರಮ ನಡೆಯುತ್ತಿದೆ. ಆದರೆ ಸುಳ್ಯದ ರಥಬೀದಿ, ಮುಖ್ಯ ರಸ್ತೆಯಿಂದ ನಗರ ಪಂಚಾಯತ್ ರಸ್ತೆ ಹೀಗೆ ಕೆಲವು ಕಡೆ ಬೆಳಗ್ಗೆ ಮತ್ತು ಸಂಜೆ ಟ್ರಾಫಿಕ್ ಆಗ್ತ ಇದೆ. ಅಲ್ಲಿ ಪೋಲಿಸರು ನಿಂತು ವ್ಯವಸ್ಥೆ ಸರಿಪಡಿಸುವಂತಾಗಬೇಕು” ಎಂದು ಹೇಳಿದರು. `’ಪ್ರೈವೆಟ್ ಬಸ್ಸುಗಳು ಸುಳ್ಯ ನಗರದಲ್ಲಿ ಸರ್ವಿಸ್ ಮಾಡುವಂತಿಲ್ಲ. ಖಾಸಗಿ ಬಸ್ ನಿಲ್ದಾಣಕ್ಕೆ ಬರಬೇಕು. ಆದರೆ ಬೆಳಗ್ಗೆ ಕ್ಯಾಂಪಸ್ ತನಕ ಬಸ್‌ಗಳು ಹೋಗುತ್ತವೆ. ಇದರಿಂದ ರಿಕ್ಷಾ ಚಾಲಕರು ಸುಮ್ಮನೆ ನಿಲ್ಲುವಂತಾಗುತ್ತದೆ. ಹಿಂದೊಮ್ಮೆ ಆರ್‌ಟಿಒ ರವರಿಗೆ ಕಂಪ್ಲೈಂಟ್ ಮಾಡಿ ಸರಿಯಾಗಿತ್ತು. ಆದರೆ ಮತ್ತೆ ಅದು ಮುಂದುವರಿದಿದೆ. ಟ್ರಾಫಿಕ್ ಸಮಸ್ಯೆ ಇನ್ನೂ ಪರಿಹಾರ ಆಗಿಲ್ಲ. ಅದಕ್ಕೆ ಟ್ರಾಫಿಕ್ ಪೋಲೀಸರ ಅಗತ್ಯ ಇದೆ” ಎಂದು ರಿಕ್ಷಾ ಯೂನಿಯನ್ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಹೇಳಿದರಲ್ಲದೆ, ಗುರುಂಪಿನಲ್ಲಿ ರಿಕ್ಷಾ ನಿಲ್ಲಿಸಲು ಅವಕಾಶ ಇತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿದರು. ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡರು ಕೂಡಾ ಪೂರಕವಾಗಿ ಮಾತನಾಡಿದರು. “ನಾವು ಇಲ್ಲಿ ಚರ್ಚೆ ಮಾಡುತ್ತೇವೆ. ಆದರೆ ಅದನ್ನು ಅನುಷ್ಠಾನ ಮಾಡಬೇಕಾದವರು ಪೋಲೀಸರು. ಅವರೇ ಸಭೆಗೆ ಬಾರದಿದ್ದರೆ ಹೇಗೆ?” ಎಂದು ಸಭೆಯಲ್ಲಿ ವರ್ತಕರ ಸಂಗದ ಅಧ್ಯಕ್ಷ ಸುಧಾಕರ ರೈ ಹೇಳಿದರು. `’ಪೋಲೀಸರ ಜತೆ ಮಾತನಾಡಿzವೆ. ಬೆಳ್ಳಾರೆಯಲ್ಲಿದ್ದಾರಂತೆ. ಸಭೆಯ ಅಭಿಪ್ರಾಯವನ್ನು ಅವರಿಗೆ ತಿಳಿಸೋಣ. ಹಾಗೂ ಮುಂದೆ ಅವರಿದ್ದೂ ಸಭೆ ನಡೆಸೋಣ” ಎಂದು ವಿನಯ ಕಂದಡ್ಕ ಹೇಳಿದರು.
`’ಕೆಲವರು ಬೆಳಗ್ಗೆ ವಾಹನ ಪಾರ್ಕಿಂಗ್ ಮಾಡಿದರೆ ಸಂಜೆ ತೆಗೆಯುವವರಿದ್ದಾರೆ. ಅಂತವರಿಗೆ ಭೇರೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಬೈಕ್ ಪಾರ್ಕಿಂಗ್ ಗೆ ಗೂ ಪ್ರತ್ಯೇಕ ಸ್ಥಳ ಗುರುತಿಸುವಂತೆ ಸದಸ್ಯರುಗಳಾದ ಶರೀಫ್ ಕಂಠಿ ಹಾಗೂ ರೋಹಿತ್ ಕೊಯಿಂಗೋಡಿ ಸಲಹೆ ನೀಡಿದರು.
ಕೆಲವು ಅಂಗಡಿಯವರು ಫುಟ್ ಪಾತ್ ಆಕ್ರಮಿಸಿ ವ್ಯಾಪಾರ ನಡೆಸುವ ಕುರಿತು ವಿನಯ ಕಂದಡ್ಕರು ಸಭೆಯಲ್ಲಿ ಪ್ರಸ್ತಾಪಿಸಿದಾಗ, “ಸಾರ್ವಜನಿಕರಿಗೆ ಅಂಗಡಿಯವರಿಂದ ತೊಂದರೆಯಾಗಬಾರದು. ಹಾಗಿದ್ದರೆ ಅವರು ವಿರುದ್ಧ ಕ್ರಮ ಕೈಗೊಳ್ಳಿ” ಎಂದು ವರ್ತಕರ ಸಂಘದ ಅಧ್ಯಕ್ಷರು ಹೇಳಿದರು.
`’ಜ್ಯೋತಿ ಸರ್ಕಲ್ ನಿಂದ ಮುಂದಕ್ಕೆ ಹಳೆಗೇಟಿನ ವರೆಗೂ ಎರಡೂ ಬದಿ ವಾಹನಗಳು ನಿಲ್ಲುವುದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ನಗರದ ನಿಯಮ ಅಲ್ಲಿಗೂ ಇರಲಿ” ಎಂದು ವ್ಯಾನ್ ಚಾಲಕ ಮಾಲಕ ಸಂಘದ ಹರಿಪ್ರಸಾದ್ ಹೇಳಿದಾಗ, `’ಈ ಕುರಿತು ಚಿಂತನೆ ನಡೆಸುವುದಾಗಿ ಅಧ್ಯಕ್ಷರು ಹೇಳಿದರು. ಸುಳ್ಯ ರಥಬೀದಿಯಲ್ಲಿ ಬಸ್ ಪಾರ್ಕಿಂಗ್‌ಗೆ ಮಾಡಲಾದ ಜಾಗದಲ್ಲೇ ಬಸ್ ನಿಲ್ಲಿಸಬೇಕೆಂಬ ಅಭಿಪ್ರಾಯ ವ್ಯಕ್ತ ವಾಯಿತು.
ಅಭಿಪ್ರಾಯ ಸಂಗ್ರಹದ ಬಳಿಕ ಮಾತನಾಡಿದ ಅಧ್ಯಕ್ಷ ವಿನಯರು, “ಸುಳ್ಯ ನಗರದಲ್ಲಿ ವನ್‌ಸೈಡ್ ಪಾರ್ಕಿಂಗ್ ಮುಂದುವರಿಸೋಣ. ನಾಮಫಲಕ ವನ್ನು ಮತ್ತೊಮ್ಮೆ ಅಳವಡಿಸಲಾಗುವುದು. ರಥಬೀದಿ ಬಸ್ ನಿಲ್ದಾಣವನ್ನು ರೋಟರಿ ಶಾಲಾ ಬಳಿ ಇರುವ ಬಸ್ ನಿಲ್ದಾಣದ ಬಳಿ ನಿಲ್ಲುವಂತೆ ಇಲಾಖೆಗೆ ಸೂಚನೆ ನೀಡೋಣ. ಶ್ರೀರಾಂ ಪೇಟೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ಲಲು ಮಾಡಿರುವ ಜಾಗದಲ್ಲೇ ಬಸ್ ನಿಲ್ಲಬೇಕು. ಆ ಬಗ್ಗೆಯೂ ಇಲಾಖೆಯವರೊಂದಿಗೆ ಚರ್ಚಿಸೋಣ. ಸದ್ಯದಲ್ಲೇ ಪೋಲೀಸರಿದ್ದೂ ಸಭೆ ನಡೆಸೋಣ. ಅದಕ್ಕೆ ಸಂಘದ ಪ್ರಮೂಕರು ಒಮದಿಬ್ಬರು ಭಾಗವಹಿಸಬೇಕೆಂದು ಅವರು ಕೇಳಿಕೊಂಡರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ಮುಖ್ಯಾಧಿಕಾರಿ ಸುಧಾಕರ್, ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಉಮ್ಮರ್ ಕೆ.ಎಸ್., ಬೂಡು ರಾಧಾಕೃಷ್ಣ ರೈ, ಬಾಲಕೃಷ್ಣ ರೈ ದುಗಲಡ್ಕ, ನಾರಾಯಣ ಶಾಂತಿನಗರ, ಶಶಿಕಲಾ ನೀರಬಿದಿರೆ, ಸುಶೀಲ ಜಿನ್ನಪ್ಪ, ಪ್ರವೀತಾ ಪ್ರಶಾಂತ್, ಶಿಲ್ಪಾ ಸುದೇವ್, ಪೂಜಿತಾ ಕೆ..ಯು. ಇದ್ದರು.
ಒಳಾಂಗಣ ಕ್ರೀಡಾಂಗಣ : ಪ್ರತ್ಯೇಕ ಸಭೆ
ಪಾರ್ಕಿಂಗ್ ಸಮಸ್ಯೆ ಸಭೆಯ ಬಳಿಕ ಕುರುಂಜಿಗುಡ್ಡೆ ಒಳಾಂಗಣ ಕ್ರೀಡಾಂಗಣದ ಕುರಿತು ಬ್ಯಾಡ್ಮಿಂಟನ್ ಅಸೋಸಿಯೇಶನ್ ಜತೆ ಸಮಾಲೋಚನೆ ನಡೆಯಿತು.
ಸಭೆಯಲ್ಲಿ ಅಸೋಸಿಯೇಶನ್ ಅಧ್ಯಕ್ಷ ಅಕ್ಷಯ್ ಕೆ.ಸಿ., ಪದಾಧಿಕಾರಿಗಳಾದ ಪ್ರಮೋದ್ ಕೆ, ಮಹೇಶ್, ಗಣೇಶ್ ಆಳ್ವಾ, ಹೇಮಂತ್ ಕಾಮತ್, ಸತೀಶ್ ಕೆ.ಜಿ., ರಿಜ್ವಾನ್ ಜನತಾ, ರಹೀಮ್ ಮೊಗರ್ಪಣೆ ಇದ್ದರು.
ಅಕ್ಷಯ್ ಕೆ.ಸಿ.ಯವರು ಬ್ಯಾಡ್ಮಿಂಟನ್ ಅಸೋಷಿಯೇಶನ್ ಕುರುಂಜಿಗುಡ್ಡೆ ಒಳಾಂಗಣ ಕ್ರೀಡಾಂಗಣದಲ್ಲಿ ಮಾಡಿದ ಕೆಲಸ ಕಾರ್ಯಗಳು, ಶಿಬಿರ ಆಯೋಜನೆಯ , ಶಾಲಾ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿರುವ ಕುರಿತು ಹೇಳಿದರಲ್ಲದೆ, ಲೆಕ್ಕಾಚಾರದ ಕುರಿತು ಸಭೆಗೆ ವರದಿ ನೀಡಿದರು.
“ಬಿ.ಪಿ.ಎಲ್. ಕಾರ್ಡ್ ಮಕ್ಕಳಿಗೂ ಅವಕಾಶ ಕಲ್ಪಿಸಲಾಗುತ್ತಿದೆಯೇ?” ಎಂದು ಮುಖ್ಯಾಧಿಕಾರಿ ಸೂಧಾಕರ್ ಕೇಳಿದಾಗ, “ಆ ರೀತಿಯ ಭೇದ ಅಲ್ಲಿ ಇಲ್ಲ. ಆಟದಲ್ಲಿ ಯಾರೂ ಆಸಕ್ತರೋ ಅವರಿಗೆ ಅಲ್ಲಿ ಅವಕಾಶ ಕಲ್ಪಿಸಲಾಗಿದೆ. ಮುಂದೆಯೂ ಅವಕಾಶ ಇದೆ. ಆದರೆ ಅಲ್ಲಿಯ ನಿಯಮ ಅವರು ಪಾಲನೆ ಮಾಡಬೇಕಾಗುತ್ತದೆ” ಎಂದು ಹೇಳಿದರಲ್ಲದೆ, “ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ಹೋಗುವ ರಸ್ತೆ ತೀರಾ ಹದಗೆಟ್ಟಿದೆ, ಕಂಪೌಂಡ್ ವ್ಯವಸ್ಥೆ ಇಲ್ಲ ಇತ್ಯಾದಿಗಳ ಕುರಿತು ಪ್ರಸ್ತಾಪಿಸಿದರು.
`’ಅಸೋಸಿಯೇಶನ್ ನವರೇ ಮುಂದುವರಿಸುವುದಿದ್ದರೆ ಅವರಿಗೆ ಲೀಸಿಗೆ ಕೊಡಿ. ನ.ಪಂ. ಯಾವ ಕಂಡೀಷನ್ ಹಾಕಬೇಕೋ ಅದನ್ನು ಹಾಕಿ. ನ.ಪಂ.ಗೂ ಆದಾಯ ಬರುವ ಕುರಿತು ಚಿಂತನೆಗಳು ಇರುತ್ತದೆ” ಎಂದು ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡರು ಸಲಹೆ ನೀಡಿದರು.ಬಳಿಕ ಲೀಸಿಗೆ ಕೊಡುವ ಕುರಿತು ನಿರ್ಧರಿಸಲಾಯಿತಲ್ಲದೇ, ಬ್ಯಾಡ್ಮಿಂಟನ್ ಅಸೋಸಿಯೇಶನ್ ನರಿಂದ ಪತ್ರ ಪಡೆದು ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ಕುರಿತು ನೀರ್ಧರಿಸಲಾಯಿತು.
ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳುವ ಕುರಿತು ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.