ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ರಿ ಎಲಿಮಲೆ ಇದರ ರೂಬಿ ಜ್ಯುಬಿಲಿ ಕಾರ್ಯಕ್ರಮಗಳ ಪ್ರಯುಕ್ತ ಮುತಅಲ್ಲಿ ಮರಿಗೆ ವಸ್ತ್ರ ವಿತರಣೆ ಹಾಗೂ ವೈದ್ಯಕೀಯ ಸಹಾಯ ಧನ ವಿತರಣೆಯ ಎಲಿಮಲೆ ನೂರುಲ್ ಹುದಾ ಮದರಸದ ರಲ್ಲಿ ಜರುಗಿತು.
ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ಇವರು ಸ್ಥಳೀಯ ಉಸ್ತಾದರಿಗೆ ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ದನ ಸಹಾಯವನ್ನು ಜಮಾಅತ್ ಕಮಿಟಿ ಕಾರ್ಯದರ್ಶಿ ಹನೀಫ್ ಮೆತ್ತಡ್ಕ ಇವರಿಗೆ ನೀಡುವ ಮೂಲಕ ಹಸ್ತಾಂತರಿಸಿದರು.
ಎಲಿಮಲೆ ಜಮಾಅತಿಗೊಳಪಟ್ಟ ಮುತಅಲ್ಲಿಂ ವಿದ್ಯಾರ್ಥಿಗಳಿಗೆ ಸಂಸ್ಥೆಯ ಉಪಾಧ್ಯಕ್ಷ ಜಿ.ಎಸ್ ಅಬ್ದುಲ್ಲ ರವರು ವಸ್ತ್ರವನ್ನು ವಿತರಿಸಿದರು.
ದುವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸ್ಥಳೀಯ ಮುದರಿಸ್ ಮುಹಮ್ಮದ್ ಜೌಹರ್ ಅಹ್ಸನಿಯವರು ಮಾತನಾಡಿ ಧಾರ್ಮಿಕ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹತ್ತುಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ಸಮಿತಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೀರ್ಮುಕ್ಕಿ ಮಸೀದಿ ಅಧ್ಯಕ್ಷ ಸಿದ್ದೀಕ್ ಜೀರ್ಮುಕ್ಕಿ ನುಸ್ರತ್ ನ ಕೋಶಾಧಿಕಾರಿ ಅಬ್ದುಲ್ ಖಾದರ್ ಪಾಣಾಜೆ ಉಪಸ್ಥಿತರಿದ್ದರು .
ನುಸ್ರತ್ ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ನಾಡಿನ ಒಳಿತಿಗಾಗಿ ಸಾಮೂಹಿಕ ಪ್ರಾರ್ಥನೆಯು ಸಲ್ಲಿಸಲಾಯಿತು.