Breaking News

ಕಾಂಗ್ರೆಸ್ ನಿಂದ ಜಟ್ಟಿಪಳ್ಳ ಶಾಲೆ ಮೇಲ್ಛಾವಣಿಯ ಕಾಮಗಾರಿ ವೀಕ್ಷಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಾಂಗ್ರೆಸ್ ನ ಹೋರಾಟದಿಂದ ಕಾಮಗಾರಿ ಆಗುತ್ತಿದೆ: ವೆಂಕಪ್ಪ ಗೌಡ

ಜಟ್ಟಿಪಳ್ಳ -ದುಗಲಡ್ಕ ರಸ್ತೆಯಲ್ಲಿ ಸಂಚರಿಸುವವರು ವೋಟ್ ಹಾಕಿಲ್ವ : ಭರತ್ ಮುಂಡೋಡಿ

ಜಟ್ಟಿಪಳ್ಳ ಸರಕಾರಿ ಶಾಲೆಯ ಮೇಲ್ಚಾವಣಿಯ ದುರಸ್ತಿ ಕಾಮಗಾರಿ ವೀಕ್ಷಣೆ ಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಶಾಲೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನಗರ ಸದಸ್ಯ ಎಂ ವೆಂಕಪ್ಪ ಮಾತನಾಡಿ ನಾವು ಈ ಹಿಂದೆ ಜಟ್ಟಿಪಳ್ಳ ಶಾಲೆಯ ಮೇಲ್ಚಾವಣಿ ಕುಸಿದುಬಿದ್ದ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿದ್ದೇವೆ ಮಕ್ಕಳ ಪೋಷಕರನ್ನು ಕರೆದು ಸಭೆಯನ್ನು ನಡೆಸಿದ್ದೇವೆ ಅದನ್ನು ಈ ಬಾಗದ ಬಿಜೆಪಿ ನಾಯಕರು ನಗರ ಪಂಚಾಯತ್ ಉಪಾಧ್ಯಕ್ಷರು ಜಟ್ಟಿಪಳ್ಳ ಶಾಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಭೆ ನಡೆಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದರು.
ನಾವು ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಊರವರನ್ನು ಸೇರಿಸಿ ಸಭೆ ನಡೆಸಿ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಂಡೆವು ನಮ್ಮ ಮನವಿಯನ್ನು ಪರಿಗಣಿಸಿ ಜಿಲ್ಲಾಧಿಕಾರಿಯವರು 2 ಲಕ್ಷ ಇದ್ದ ಅನುದಾನಕ್ಕೆ ಪ್ರಾಕೃತಿಕ ವಿಕೋಪದಿಂದ 3ಲಕ್ಷ ಸೇರಿಸಿ ಐದು ಲಕ್ಷ ನೀಡಿದ್ದಾರೆ.
ಈಗ ಕೆಲಸ ನಡೆಯುತ್ತಿದೆ ಅದು ಕಾಂಗ್ರೆಸ್ ಪ್ರಯತ್ನ ಆಗಿದೆ.ಇಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಬಂದು ನೀವು ಕಾಂಗ್ರೆಸ್ ಪಕ್ಷದ ಸಭೆಗೆ ಅನುಮತಿ ಕೊಟ್ಟಿದ್ದಿರಿ ಎಂದು ಶಾಲೆಯ ಅಧ್ಯಾಪಕರ ಮೇಲೆ ಅರೋಪಿಸುವಂತಹ ನೀಚ ಕೆಲಸ ಮಾಡುತ್ತಾರೆ ಎಂದು ವೆಂಕಪ್ಪ ಗೌಡರು ಹೇಳಿದರು.

ನಾವು ನಿಯೋಗ ಹೋಗುವುದು ಅಥಾವ ಅಧಿಕಾರದಲ್ಲಿರುವರನ್ನು ಎಚ್ಚರಿಕೆಯನ್ನು ಕೊಡುವುದು ನಮ್ಮ ಕರ್ತವ್ಯ ನಾವು ಎಚ್ಚರಿಕೆ ಕೊಡಲಿಕ್ಕೆ ಹೊದರೆ ಕಾಂಗ್ರೆಸ್ ನವರ ಚಾಲಿ ಅವರಿಗೆ ಇದೆ ಕೆಲಸ ಅಂತ ಹೇಳುವುದು.
ತಾಲೂಕಿನ ಹೆಚ್ಚಿನ ಪ್ರಾಥಮಿಕ ಶಾಲೆಗಳನ್ನು ನಮ್ಮ ಹಿರಿಯರ ಕಾಲದಲ್ಲಿ ಜಾಗವನ್ನು ದಾನ ಮಾಡಿ ಶಾಲೆಯನ್ನು ಕಟ್ಟಿಸಿದ್ದಾರೆ. ನೂರು ವರ್ಷಗಳಾದ ಶಾಲೆ ಕಟ್ಟಡಗಳು ಸುಳ್ಯ ತಾಲೂಕಿನಲ್ಲಿ ಇದೆ. ಎಲ್ಲಿ ಅದು ಹಳೇತಾಗುತ್ತದೆ ಎಲ್ಲಿ ಶಾಲೆ ಕಟ್ಟಡಕ್ಕೆ ತೊಂದರೆ ಆಗುತ್ತದೆ ಅದನ್ನು ದುರಸ್ತಿ ಮಾಡುವ ಕೆಲಸ ಆಗಬೇಕು.
ಈಗಿನ ಜನಪ್ರತಿನಿಧಿಗಳಿಗೆ ಅದನ್ನು ಮಾಡಲಿಕ್ಕೆ ಆಗುವುದಿಲ್ಲಂತಾದರೇ ಅದನ್ನು ನಾವು ವೈಫಲ್ಯ ಅಂತ ಹೇಳುವುತ್ತೆವೆ.
ಬೆನ್ಪಿಟ್ಟ್ ಕೊಡುವುವಾಗ ಕಾಂಗ್ರೆಸ್ ಬಿಜೆಪಿ ಅಂತಹ ಮಾಡುವ ಶಾಸಕರಿಗೆ ಈ ಶಾಲೆಯ ಕಟ್ಟಡ ದುರಸ್ತಿ ಮಾಡಲಿಕ್ಕೆ ಕಾಂಗ್ರೆಸ್ ಬಿಜೆಪಿ ಅಂತ ನೊಡ್ತಿರ ಇಲ್ಲಿ ಕಲಿಲಿಕೆ ಬರುವ ಮಕ್ಕಳು ಕಾಂಗ್ರೆಸ್ ಬಿಜೆಪಿ ಅಂತ ಬರುತ್ತಾರ ಎಂದು ಪ್ರಶ್ನಿಸಿದರು.

ಜಟ್ಟಿಪಳ್ಳ ದುಗಲಡ್ಕ ರಸ್ತೆ ಇದೆಯಲ್ಲ, ಜನ ಕೂಗತ್ತ ಇದ್ದರಲ್ಲ,ಇದನ್ನು ಮಾಡಬೇಕು ಅಂತ ನಿಯೋಗ ಹೊಗ್ತಾ ಇದ್ದರಲ್ಲ, ಅಲ್ಲಿ ಯಾರು ಇವರಿಗೆ ವೋಟ್ ಹಾಕಿದವರು ಇಲ್ಲ ಅಂತ ಹಾಗೆ ಬಿಡ್ತಾ ಇದ್ದಾರ ಇತಂಹ ಸಮಸ್ಯೆಗಳನ್ನು ನಾವು ಪ್ರಶ್ನಿಸಿಸುತ್ತಿದ್ದೇವೆ ದಯವಿಟ್ಟು ಶಾಸಕರಾಗಿದ್ದವರು ತಮ್ಮ ಜವಾಬ್ದಾರಿಯನ್ನು ಅರಿತು ಸಚಿವರಾಗಿದ್ದುಕೊಂಡು ಕರ್ನಾಟಕ ರಾಜ್ಯದ ಮಂತ್ರಿಯಾಗಿ ಅವರ ಕರ್ತವ್ಯವನ್ನು ನಿಭಾಯಿಸಿ ಉತ್ತಮ ಕೆಲಸ ಮಾಡುವುದು ಹೊರತು ವಿರೋದ ಪಕ್ಷವನ್ನು ದೂರಿಸಿಕೊಂಡು ಜನರಿಗೆ ತೊಂದರೆ ಆಗುವಂತ ಕೆಲಸ ಮಾಡಬೇಡಿ ಎಂದು ಜಿ.ಪಂ ಮಾಜಿ ಸದಸ್ಯ ಭರತ್ ಮುಂಡೋಡಿ ಹೇಳಿದರು.
ಶಾಲೆ ಭೇಟಿ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್, ನ.ಪಂ ಮಾಜಿ ಅಧ್ಯಕ್ಷ ದಿನೇಶ್ ಅಂಬೆಕ್ಕಲ್ಲು,ಕಾಂಗ್ರೆಸ್ ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.