ಬೆಳ್ಳಾರೆ ಗ್ರಾಮದ ಕುಂಞಗುಡ್ಡೆ ನಿವಾಸಿ ,ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಮುಅದ್ಸಿನ್ ಆಗಿ ಸೇವೆ ಸಲ್ಲಿಸಿದ ಮರ್ಹೂಂ ಅರಬಿ ಮುಕ್ರಿ ಹಾಜಿಯವರ ಪತ್ನಿ ಆಸ್ಯಮ್ಮ ಅಲ್ಪಕಾಲದ ಅಸೌಖ್ಯದಿಂದ ಜುಲೈ 22 ರಂದು ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು.ಮೃತರು 7 ಮಂದಿ ಪುತ್ರರನ್ನು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.