Breaking News

ವಿನೋಬಾನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಹರಿಪ್ರಸಾದ್ ಕೊಯಿಂಗಾಜೆ ಅವರು ಉದ್ಘಾಟಿಸಿ,ಶುಭಹಾರೈಸಿದರು.
ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಅಡ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಭಾರತಿ ಕರ್ನಾಟಕದ ಖೇಲ್ ಖೂದ್ ಪ್ರಮುಖರಾದ ಕರುಣಾಕರ ಕಲ್ಲಡ್ಕ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕರಾದ ಸುಧಾಕರ ಕಾಮತ್ ವಿನೋಬನಗರ,ಆಡಳಿತ ಮಂಡಳಿ ಸದಸ್ಯ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಆಡಳಿತಾಧಿಕಾರಿ ಎನ್‌. ಗೋಪಾಲ್ ರಾವ್,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಸೌಮ್ಯ ಕದಿಕಡ್ಕ ,ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಗಿರೀಶ್ ಕುಮಾರ್,ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕ ಜಯಪ್ರಸಾದ್ ಕಾರಿಂಜ ಉಪಸ್ಥಿತರಿದ್ದರು‌.
ಸಮರೋಪ ಸಮಾರಂಭದಲ್ಲಿ ಪೋಷಕ ಸದಸ್ಯ ಗಂಗಾದರ ಕಾಳಮನೆ ,ಶ್ರೀಮತಿ ಸೌಮ್ಯ ಕದಿಕಡ್ಕ, ಹರಿಪ್ರಸಾದ್ ಕೊಯಿಂಗಾಜೆ ಅವರುಗಳು ವಿಜೇತ ಮಕ್ಕಳಿಗೆ ಪ್ರಶಸ್ತಿ ನೀಡಿ‌ ಗೌರವಿಸಿದರು.

*ಪ್ರಶಸ್ತಿ ವಿವರ:*
ಚದುರಂಗ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಬಾಲವರ್ಗ ಪ್ರಥಮ ಶಾರದಾ ವಿದ್ಯಾಲಯ ಕೊಡಿಯಾಲಬೈಲ್ ಮಂಗಳೂರು, ದ್ವಿತೀಯ ಶ್ರೀ ರಾಮ ವಿದ್ಯಾಲಯ ಕಲ್ಲಡ್ಕ ಪಡೆದುಕೊಂಡಿದೆ.
ಕಿಶೋರ ವರ್ಗದ ಸ್ಪರ್ಧೆಯಲ್ಲಿ ಪ್ರಥಮ ಶಾರದಾ ವಿದ್ಯಾಲಯ ಕೊಡಿಯಾಲಬೈಲ್ ಮಂಗಳೂರು,
ದ್ವಿತೀಯ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಪಡೆದುಕೊಂಡಿತು.
ತರುಣ ವರ್ಗದ ಸ್ಪರ್ಧೆಯಲ್ಲಿ ಪ್ರಥಮ ವಿವೇಕಾನಂದ ಪಿ.ಯು‌. ಕಾಲೇಜು ಪುತ್ತೂರು, ದ್ವಿತೀಯ ಶಾರದಾ ವಿದ್ಯಾಲಯ ಕೊಡಿಯಾಲಬೈಲ್ ಮಂಗಳೂರು ಪಡೆದುಕೊಂಡರು.
ಬಾಲಕಿಯರ ವಿಭಾಗದ ಸ್ಪರ್ಧೆಯ ಬಾಲವರ್ಗ ವಿಭಾಗದಲ್ಲಿ ಪ್ರಥಮ ಶಾರದಾ ವಿದ್ಯಾಲಯ ಕೊಡಿಯಾಲಬೈಲ್ ಮಂಗಳೂರು,
ದ್ವಿತೀಯ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಪಡೆದುಕೊಂಡಿತು.
ಕಿಶೋರ ವರ್ಗದ ವಿಭಾಗದಲ್ಲಿ
ಪ್ರಥಮ ಶಾರದಾ ವಿದ್ಯಾಲಯ ಕೊಡಿಯಾಲಬೈಲ್ ಮಂಗಳೂರು,
ದ್ವಿತೀಯ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಪಡೆದುಕೊಂಡಿದೆ.
ತರುಣ ವರ್ಗದ ವಿಭಾಗದಲ್ಲಿ ಪ್ರಥಮ ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ, ದ್ವಿತೀಯ ವಿವೇಕಾನಂದ ಪಿ.ಯು ಕಾಲೇಜು ಪುತ್ತೂರು ಪಡೆದುಕೊಂಡಿತು.
ಚದುರಂಗ ಸ್ಪರ್ಧೆಯ ವೈಯಕ್ತಿಕ ವಿಭಾಗದ ಬಾಲಕರಲ್ಲಿ ಪ್ರಥಮ ಅಂಚಿತ್ಯ ಭಟ್, ದ್ವಿತೀಯ ಸುಶಾಂತ್ ವಾಮನ್ ಶೆಟ್ಟಿ, ತೃತೀಯ:ಪ್ರಶ್ಣು ಪಡೆದುಕೊಂಡಿದ್ದಾರೆ.
ಬಾಲವರ್ಗ: ಬಾಲಕಿಯರ ವಿಭಾಗದಲ್ಲಿ ಪ್ರಥಮ: ಕೃತಿ ರೈ,
ದ್ವಿತೀಯ: ಇಶಿತಾ, ತೃತೀಯ: ಕೃತಿಕಾ ಪಡೆದುಕೊಂಡರು.
ಕಿಶೋರ ವರ್ಗದ ಬಾಲಕರಲ್ಲಿ
ಪ್ರಥಮ ಆಯುಷ್ ನರೇಂದ್ರ, ದ್ವಿತೀಯ:ಭುವನ್ ರಾವ್, ತೃತೀಯ: ಧನ್ವಿನ್ ಅಶೋಕ್ ಪಡೆದರು.
ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಮೇಧಾ ಜಿ. ಭಟ್, ದ್ವಿತೀಯ:ಶ್ರೀಕಾ ಎಸ್ ಹೆಗ್ಡೆ,
ತೃತೀಯ ಅಲೀಮತ್ ಸುಹೈಲಾ ಎ.ಎಸ್. ಪಡೆದುಕೊಂಡಿದ್ದಾರೆ.
ತರುಣ ವರ್ಗದ ಬಾಲಕರ ವಿಭಾಗದಲ್ಲಿ ಪ್ರಥಮ ಋತ್ವಿಕ್ ಸಾಯಿ ಗಣೆಶ್, ದ್ವಿತೀಯ ಕೈಝೇನ್ ಎಸ್, ತೃತೀಯ:ಗುರುರಾಜ್ ಬಿ. ಎನ್. ಪಡೆದಿದ್ದಾರೆ.
ತರುಣ ವರ್ಗದ ಬಾಲಕಿಯರ ವಿಭಾಗದಲ್ಲಿ ಪ್ರಥಮ ದೀಪ್ತಿ ಲಕ್ಷ್ಮೀ ಕೆ.,ದ್ವಿತೀಯ ಆಶಿಕಾ ಎಮ್.,
ತೃತೀಯ: ಕುಮುದಾ ಎಮ್. ವಿ‌. ಪಡೆದಿದ್ದಾರೆ. ಸಹಶಿಕ್ಷಕ ಶಶಿದರ ಅವರು ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಅರ್ಚನಾ ವಂದಿಸಿದರು .ಸಹಶಿಕ್ಷಕಿ ಶ್ರೀಮತಿ ಪಾವನಾ ಕೆ. ಕಾರ್ಯಕ್ರಮ ನಿರೂಪಿಸಿದರು.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.