ಸಾರ್ವಜನಿಕ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಇವರ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜು.19ರಂದು ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿ ಯಜ್ನೇಶ್ ಪಿ. ಯು. 54ರಿಂಧ 58 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕನಕಮಜಲಿನ ಉಮೇಶ್ ಪಿ. ಹಾಗೂ ಪ್ರೇಮಲತಾ ದಂಪತಿಗಳ ಪುತ್ರ. ವಿದ್ಯಾಸಂಸ್ಥೆಯ ಇನ್ನೋರ್ವ ವಿದ್ಯಾರ್ಥಿ ಸುಶಾಂತ್ ಪಿ. ಆರ್. ಇವರು 40 – 45 ಕೆ. ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಈತ ಜಾಲ್ಸೂರು ಗ್ರಾಮದ ಅರ್ಭಡ್ಕ ರಾಜೇಶ್ ಪಿ. ಗೌಡ ಹಾಗೂ ಶ್ರೀಮತಿ ರಂಜಿನಿ ದಂಪತಿ ಪುತ್ರ. ಇವರಿಗೆ ಕರಾಟೆ ಶಿಕ್ಷಕ ಚಂದ್ರಶೇಖರ ಕನಕಮಜಲು ಇವರು ತರಬೇತಿ ನೀಡಿರುತ್ತಾರೆ.