ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇದರ ಸ್ಕೌಟ್ ಹಾಗೂ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಅರಂತೋಡು ಉಕ್ರಾಜೆಯ ಪ್ರಭಾಕರ ಪೂಜಾರಿಮನೆ ಇವರ ಹೊಲದಲ್ಲಿ ನಾಟಿ ನೆಡುವ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಹರಿಪ್ರಸಾದ್ ಕಲ್ಲುಗದ್ದೆ ವಿದ್ಯಾರ್ಥಿಗಳಿಗೆ ನಾಟಿಯ ವಿವಿಧ ಹಂತಗಳನ್ನು ವಿವರಿಸಿ, ಮಾಹಿತಿ ನೀಡಿದರು.
20 ವಿದ್ಯಾರ್ಥಿಗಳ ತಂಡ ನಾಟಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಸಂದೇಶ್ ಕುಮಾರ್, ಮನೋಜ್ ಉಳುವಾರು
ಉಪಸ್ಥಿತರಿದ್ದರು.