ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ
ಇಲ್ಲಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಜು. 17ರಂದು ಸುಬ್ರಹ್ಮಣ್ಯ ಸಮೀಪದ ಆಶ್ರಮ ಶಾಲೆಗೆ ಭೇಟಿ ನೀಡಿ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ. ನಂತರ ಅಲ್ಲಿನ ಮಕ್ಕಳಿಗೆ ಒಂದಷ್ಟು ಆಟ ವನ್ನು ಆಡಿಸಿ ಖುಷಿ ಪಡಿಸಿದರು. ಜೊತೆಗೆ ಕೆ.ಎಸ್.ಎಸ್ ಮಹಾವಿದ್ಯಾಲಯದ ರೋವರ್ಸ್ ಸ್ಕೌಟ್ ಲೀಡರ್ ಮನೋಹರ ವಿಜೇತರಿಗೆ ಬಹುಮಾನವನ್ನು ವಿತರಿಸಿದರು ಹಾಗೂ ಆಟದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಕೂಡ ಸಮಾಧಾನಕರ ಬಹುಮಾನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೆ,ಎಸ್ ಎಸ್ ಮಹಾವಿದ್ಯಾಲಯದ ರೆಂಜರ್ಸ್ ಲೀಡರ್ ಶ್ರೀಮತಿ ಪ್ರಮೀಳಾ ಎನ್ ಉಪಸ್ಥಿತರಿದ್ದರು. 35ರೇಂಜರ್ಸ್ ಮತ್ತು 25 ರೋವರ್ಸ್ ವಿದ್ಯಾರ್ಥಿಗಳು ಹಾಜರಿದ್ದರು, ಆಶ್ರಮ ಶಾಲೆಯ ಅಧ್ಯಾಪಕರು ಸಹಕರಿಸಿದರು..