Breaking News

ಇಬ್ಬರು ಮುದ್ದು ಮಕ್ಕಳ ತಂದೆ ರವಿ ಜಯನಗರ ರವರ ಚಿಕಿತ್ಸೆಗೆ ನೆರವಾಗಿ, ಬಡ ಕುಟುಂಬದ ಕಣ್ಣೀರು ಒರೆಸಲು ನೆರವಾಗುವಿರಾ ?

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕುಟುಂಬದ ಜವಾಬ್ದಾರಿಯನ್ನು ಹೊತ್ತು,ರಾತ್ರಿ ಪಾಳಯದಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡಿ ತನ್ನ ಮುದ್ದು ಮಕ್ಕಳಿಗೆ ಅನ್ನ ನೀಡುವ ಬಡತಾಯಿಗೆ ಆಸರೆಯಾಗುವಿರಾ?

ಇದೊಂದು ಮನ ಮಿಡಿಯುವ ದೃಶ್ಯ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕಂಡು ಮನನೊಂದು ಈ ಪರಿ ಬೇಡುತ್ತಿದ್ದೇನೆ.

ಮೂಲತ ಮಡಿಕೇರಿ ನಿವಾಸಿ ರವಿ ಎಂಬ ವ್ಯಕ್ತಿಯೋರ್ವರು ಕಳೆದ ಹತ್ತು ವರ್ಷಗಳಿಂದ ಸುಳ್ಯದ ಪೈಚಾರು ಬಳಿ ಬಾಡಿಗೆ ಮನೆಯಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನವನ್ನು ನಡೆಸಿ ಆ ಬಡ ಕುಟುಂಬಕ್ಕೆ ಆಸರೆಯಾಗಿದ್ದರು.
*ಕಳೆದ ಕೆಲವು ವರ್ಷಗಳಿಂದ ತನ್ನ ಮನೆಯನ್ನು ಜಯನಗರದ ಬಾಡಿಗೆ ಮನೆಯೊಂದಕ್ಕೆ ಬದಲಾಯಿಸಿ ಸುಳ್ಯ ಪರಿಸರದಲ್ಲಿ ಕೂಲಿ ಕಾರ್ಮಿಕನಾಗಿ, ಕೆಂಪು ಕಲ್ಲು ಕಟ್ಟುವ ಕಟ್ಟಡ ಕಾರ್ಮಿಕರಾಗಿ ದುಡಿದು ತನ್ನ ಪುಟ್ಟು ಕುಟುಂಬವನ್ನು ಸಂತೋಷದಿಂದ ಸಾಗಿಸುತ್ತಿದ್ದರು.

ದೇವರ ವಿಧಿ ಎಂಬಂತೆ ಕಳೆದ ಮೂರು ತಿಂಗಳ ಹಿಂದೆ ಬೆಳಿಗ್ಗೆ ತನ್ನ ಮನೆಯಿಂದ ಕೂಲಿ ಕೆಲಸಕ್ಕೆ ಎಂದು ಹೋದ ರವಿಯವರನ್ನು ಸಂಜೆಯ ವೇಳೆ ಅವರು ಕೆಲಸ ಮಾಡುತ್ತಿದ್ದ ಮನೆಯವರು ಆಟೋದಲ್ಲಿ ಕರೆತಂದು ಮುದ್ದು ಮಕ್ಕಳ ಎದುರಿನಲ್ಲಿ ಅವರ ರೂಮಿನ ಒಂದು ಮೂಲೆಯಲ್ಲಿ ಚಾಪೆ ಹಾಕಿ ಮಲಗಿಸಿ ಹೋದರು.

ಅಷ್ಟೊತ್ತಿಗಾಗಲೇ ಹೋಟೆಲ್ ಕೆಲಸಕ್ಕೆಂದು ಹೋಗಿದ್ದ ರವಿ ಅವರ ಪತ್ನಿ ಚಂದ್ರಾವತಿ ರವರು ಮನೆಗೆ ಬಂದಾಗ ಪ್ರೀತಿಯ ಅಪ್ಪನ ಎದುರು ಎರಡು ಮುದ್ದು ಮಕ್ಕಳು ಕಣ್ಣೀರಿಡುತ್ತಾ ಕುಳಿತಿದ್ದನ್ನು ಕಂಡ ತಾಯಿ ಪತಿ ರವಿಯವರ ಬಳಿ ವಿಚಾರಿಸಿದಾಗ ಕೆಲಸ ಮಾಡುತ್ತಿದ್ದ ಸಂದರ್ಭ ಆಯ ತಪ್ಪಿಕೆಳಗೆ ಬಿದ್ದು ಸೊಂಟಬೇನೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.

ಕೂಡಲೇ ಸ್ಥಳೀಯರ ಸಹಕಾರದಿಂದ ಸುಳ್ಯ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಅಷ್ಟೊತ್ತಿಗಾಗಲೇ ಆ ಬಡ ಜೀವ ರವಿಯವರ ಸೊಂಟದಿಂದ ಕೆಳಭಾಗ ಸಂಪೂರ್ಣವಾಗಿ ನಿರ್ಜೀವ ಸ್ಥಿತಿಗೆ ತಲುಪಿತ್ತು.
ತನ್ನ ಕೈ ಕಾಲುಗಳ ಶಕ್ತಿಯಿಂದ ದುಡಿದು ಅ ಪುಟ್ಟ ಬಡ ಕುಟುಂಬದ ಜೀವನ ನಿರ್ವಹಣೆ ನಡೆಸುತ್ತಿದ್ದ ಮನೆಯ ಆಧಾರಸ್ತಂಭವೇ ಮುರಿದುಬಿದ್ದಿತ್ತು.

 

ತುತ್ತು ಅನ್ನಕ್ಕಾಗಿ ಚಡಪಡಿಸುತ್ತಿದ್ದ ಆ ಬಡ ಕುಟುಂಬಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯಕೀಯ ವೆಚ್ಚವನ್ನು ಬರಿಸಲು ಸಾಧ್ಯವಾಗದೆ ಅಲ್ಪಸ್ವಲ್ಪ ಚಿಕಿತ್ಸೆಯ ಬಳಿಕ ಮತ್ತೆ ರವಿಯವರನ್ನು ಜಯನಗರ ಮನೆಗೆ ಕರೆತಂದು ಮಲಗಿಸಲಾಯಿತು.

ದಿನ ಕಳೆದಂತೆ ಅವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಗಮನಿಸಿದ  ಪತ್ನಿ ಚಂದ್ರಾವತಿ ತನ್ನ ಜೀವನದ ಸಂಗಾತಿ ತನ್ನ ಸರ್ವಸ್ವವೆಂದು ನಂಬಿದ ಪತಿಯನ್ನು ಮತ್ತೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ.

ಬೆಳಿಗ್ಗೆಯಿಂದ ಸಂಜೆಯವರೆಗೆ ಆಸ್ಪತ್ರೆಯಲ್ಲಿ ಸೊಂಟದಿಂದ ಕೆಳಗೆ ನಿರ್ಜೀವ ಸ್ಥಿತಿಯಲ್ಲಿರುವ ತನ್ನ ಪತಿಯ ಸೇವೆಯನ್ನು ಮಾಡಿ ಸಂಜೆ ಆರು ಗಂಟೆಯ ಬಳಿಕ ತಾನು ಕೆಲಸ ಮಾಡುತ್ತಿರುವ ಹೋಟೆಲ್ ಗೆ ತೆರಳಿ ರಾತ್ರಿ 11:30 ಗಂಟೆ ತನಕ ಮುಸುರೆಯನ್ನು ತಿಕ್ಕಿ ಅದರಿಂದ ಸಿಗುವ 300 ರೂಪಾಯಿಗಳಿಂದ ತನ್ನ ಪತಿಯ ಚಿಕಿತ್ಸಾ ವೆಚ್ಚ ಮತ್ತು ತನ್ನ ಮುದ್ದು ಮಕ್ಕಳಿಗೆ ತುತ್ತು ಅನ್ನವನ್ನು ನೀಡುವ ಕಣ್ಣೀರಿನ ಜೀವನವನ್ನು ನಡೆಸಿಕೊಂಡು ತಾನು ನಂಬಿದ ದೇವರ ಮೇಲೆ ಭಾರವನ್ನು ಇಟ್ಟು ಕಾಲ ಕಳೆಯುತ್ತಾರೆ.

ಅಷ್ಟೊತ್ತಿಗಾಗಲೇ ತಮ್ಮ ಆತ್ಮೀಯರೊಬ್ಬರು ತನ್ನ ಮುದ್ದು ಮಕ್ಕಳಲ್ಲಿ ಒಬ್ಬನಾದ ಆರನೇಯ ತರಗತಿಯ ವಿದ್ಯಾರ್ಥಿ ಯಕ್ಷಿತ್ ನನ್ನು ತಮ್ಮ ಮನೆಯಲ್ಲಿ ಇರಿಸಿ ಈ ಮಗುವನ್ನು ನಾವು ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡುತ್ತಾರೆ.

ಇದೀಗ ಆರು ವರ್ಷದ ಪುಟ್ಟ ಮಗಳು ಲಾಸ್ಯ ಅಮ್ಮನ ಬಳಿ ಇದೆ.

ಆದ್ದರಿಂದ ಈ ನೋವಿನ ಬರವಣಿಗೆಯನ್ನು ವೀಕ್ಷಿಸಿರುವ ತಾವುಗಳು ಬಡ ಕುಟುಂಬಕ್ಕೆ ಸಹಾಯ ಹಸ್ತವನ್ನು ನೀಡುವಂತೆ ಲೇಖನದ ಮೂಲಕ ಬೇಡಿಕೊಳ್ಳುತ್ತಿದ್ದೇನೆ.

ಒಮ್ಮೆಯಾದರೂ ಈ ಬಡ ಜೀವವನ್ನು ಸಂಪರ್ಕಿಸಿ..8861457451
A. c. No 110058630710
Ifsc. CNRB0002483

ಸರಕಾರದಿಂದ ಸಿಗಬಹುದಾದಂತ ಯಾವುದಾದರೂ ಯೋಜನೆಗಳಿದ್ದರೆ ಇವರಿಗೆ ಬರುವಂತೆ ಸಹಕರಿಸಿ

– ಹಸೈನಾರ್ ಜಯನಗರ ಪತ್ರಿಕಾ ವರದಿಗಾರರು ಸುಳ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.