Breaking News

1837 ರ ಅಮರ ಸುಳ್ಯದ ಸ್ವಾತಂತ್ರ್ಯ ಸಮರದ ಕುರಿತು ಜು.31 ರಂದು ಸುಳ್ಯದಲ್ಲಿ ವಿಚಾರಗೋಷ್ಠಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಗೌಡರ ಯುವ ಸೇವಾ ಸಂಘ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ 75 ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಅಂಗವಾಗಿ 1837 ರ ಅಮರ ಸುಳ್ಯದ ಸ್ವಾತಂತ್ರ್ಯ ಸಮರದ ಬಗ್ಗೆ ವಿಚಾರಗೋಷ್ಠಿ ಜು.31 ರಂದು ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ.ಎನ್.ಎ. ಜ್ಞಾನೇಶ್ ಹೇಳಿದರು.

ಜು.21 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ದೊರಕಿದ 75 ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿರುವ ಈ ಸಂದರ್ಭದಲ್ಲಿ 1837 ಅಮರ ಸುಳ್ಯ ಸ್ವಾತಂತ್ರ್ಯ ಸಮರದ ಬಗ್ಗೆ ಬೆಳಕು ಚೆಲ್ಲುವ ವಿಚಾರಗೋಷ್ಠಿ ಇದಾಗಿದೆ. ವಿಚಾರಗೋಷ್ಠಿ ಯಲ್ಲಿ 1837 ರ ಅಮರ ಸುಳ್ಯದ ಸ್ವಾತಂತ್ರ್ಯ ಸಮರದ ಬಗ್ಗೆ ಸಂಶೋಧನೆ ಗಳನ್ನು ಕೈಗೊಂಡ ಸಂಶೋಧಕರು, ಕೃತಿಗಳ ಮೂಲಕ ಈ ಘಟನೆಯನ್ನು ಪ್ರಸ್ತುತ ಪಡಿಸಿದ ಸಾಹಿತಿಗಳು, ಚಿಂತಕರು ಇತಿಹಾಸ ತಜ್ಞರು ಭಾಗವಹಿಸಲಿದ್ದಾರೆ.
ಗೋಷ್ಠಿಯ ಅಧ್ಯಕ್ಷತೆಯನ್ನು ಜೆ.ಎನ್.ಯು. ನವದೆಹಲಿ ನಿವೃತ್ತ ಪ್ರಾಧ್ಯಾಪಕ ಮತ್ತು ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆ ವಹಿಸಲಿದ್ದಾರೆ.

ಸಂಶೋಧಕ ಡಾ.ಪ್ರಭಾಕರ ನೀರುಮಾರ್ಗ, ಸಾಹಿತಿ ಡಾ.ಪ್ರಭಾಕರ ಶಿಶಿಲ, ಸಾಹಿತಿ ವಿದ್ಯಾಧರ ಬಡ್ಡಡ್ಕ, ಸಾಹಿತಿ ಅರವಿಂದ ಚೊಕ್ಕಾಡಿ, ಸಂಶೋಧಕ ಗೋಪಾಲ್ ಪೆರಾಜೆಯವರು ವಿಚಾರ ಮಂಡನೆ ಮಾಡುವರು. ಗೋಷ್ಠಿಯಲ್ಲಿ ಇತಿಹಾಸ ಸಂಶೋದಕ ಎ.ಕೆ. ಹಿಮಕರ, ಸಂಶೋಧಕ ಅನಂತರಾಜ ಗೌಡ, ಸಾಹಿತಿ ಡಾ.ಪೂವಪ್ಪ ಕಣಿಯೂರು, ಸಂಶೋಧಕಿ ಡಾ.ಪ್ರತಿಮಾ ಜಯರಾಮ್, ಸಾಹಿತಿ ಶ್ರೀಮತಿ ಸಹನಾ ಕಾಂತಬೈಲು ಭಾಗವಹಿಸುವರು ಎಂದು ಅವರು ವಿವರ ನೀಡಿದರು.

ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಮಾತನಾಡಿ ಅಮರ ಸ್ವಾತಂತ್ರ್ಯ ಸಂಗ್ರಾಮ ಸುಳ್ಯದಿಂದಲೇ ನಡೆದಿದೆ ಎನ್ನುವುದು ನಮ್ಮ ಹೆಮ್ಮೆ. ಇದರ ಮುಂಚೂಣಿ ನಾಯಕ ಕೆದಂಬಾಡಿ ರಾಮಯ್ಯ ಗೌಡರ ಹೆಸರು ಶಾಶ್ವತವಾಗಿರಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿವೆ. ಅಮರ ಸ್ವಾತಂತ್ರ್ಯ ಸಂಗ್ರಾಮದ ವಿಚಾರ ಪಠ್ಯ ದಲ್ಲಿ ಸೇರಬೇಕು. ಜತೆಗೆ ಕೆದಂಬಾಡಿ ರಾಮಯ್ಯ ಗೌಡರ ಹೆಸರು ಸುಳ್ಯ ಬಸ್ ನಿಲ್ದಾಣ ಕ್ಕೆ, ಉಬರಡ್ಕ ರಸ್ತೆಗೆ ಇಡಬೇಕು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕೆಲಸ ಸರಕಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಗೌಡರ ಯುವ ಸೇವಾ ಸಂಘದ ಪ್ರಮುಖರಾದ ಬೆಳ್ಯಪ್ಪ ಗೌಡ ಬಳ್ಳಡ್ಕ, ವೀರಪ್ಪ ಗೌಡ ಕಣ್ಕಲ್, ದಿನೇಶ್ ಮಡಪ್ಪಾಡಿ, ಪಿ.ಎಸ್. ಗಂಗಾಧರ್, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.