Breaking News

ಕಳಂಜ ಘಟನೆಯ ಬಗ್ಗೆ ತನಿಖೆಗೆ ವಿಶೇಷ ತಂಡ ರಚನೆ ಮಾಡಿ : ಎಸ್.ಡಿ.ಪಿ.ಐ. ರಾಜ್ಯಾಧ್ಯಕ್ಷ ಅಬ್ದುಲ್ ‌ಮಜೀದ್ ಒತ್ತಾಯ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಎಸ್‌ಡಿಪಿಐ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ

 

ಸುಳ್ಯ ತಾಲೂಕಿನ ಕಳಂಜದಲ್ಲಿ ಗುಂಪು ಹಲ್ಲೆ ಅಮಾಯಕ ಯುವಕನನ್ನು ಕೊಲೆ ಮಾಡಿರುವುದು ಪೂರ್ವ ಯೋಜಿತ ಕೃತ್ಯ. ಇದರ ಬಗ್ಗೆ ತನಿಖೆ ನಡೆಸಲು ಸರಕಾರ ಪ್ರತ್ಯೇಕ ತನಿಖಾ ತಂಡವನ್ನು ರಚಿಸಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಒತ್ತಾಯಿಸಿದ್ದಾರೆ.

ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಈ ರೀತಿಯ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಂಡು ಜವಾಬ್ದಾರಿಯುತವಾಗಿ ವರ್ತಿಸಬೇಕು. ಮೃತನ ಕುಟುಂಬಕ್ಕೆ ಸರಕಾರ 25 ಲಕ್ಷ ರೂ ಪರಿಹಾರ ಘೋಷಿಸಬೇಕು. ಈ ನೆಲೆಯಲ್ಲಿ ಸರಕಾರ ರಾಜಧರ್ಮ ಪಾಲಿಸಬೇಕು. ಸಮಾಜದಲ್ಲಿ ಸಂಯಮ, ಶಾಂತಿ, ಸೌಹಾರ್ಧತೆ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಎಸ್‌ಡಿಪಿಐ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ:
ರಾಜ್ಯದ 224 ಕ್ಷೇತ್ರಗಳಲ್ಲಿಯೂ ಅಧ್ಯಯನ ನಡೆಸುತ್ತಿದ್ದೇವೆ. ಈಗಾಗಲೇ ಸ್ಪರ್ಧಿಸಬಹುದಾದ 100 ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ. ಮುಂದಿನ ತಿಂಗಳಲ್ಲಿ ಅಭ್ಯರ್ಥಿಗಳ ಪ್ರಥಮ ಪಟ್ಟಿ ಘೋಷಣೆ ಮಾಡಲಾಗುವುದು. 224 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡುವ ಬಗ್ಗೆ ಪಕ್ಷ ಯೋಜನೆ ರೂಪಿಸಿದೆ ಎಂದು ಹೇಳಿದರು. ಎಸ್‌ಡಿಪಿಐ ಬಿಜೆಪಿಯ ಬಿ ಟೀಂ ಎಂದು ಹೇಳುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಕಾಂಗ್ರೆಸ್‌ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಸೈದ್ಧಾಂತಿಕವಾಗಿ ಎಸ್‌ಡಿಪಿಐ ಕಾಂಗ್ರೆಸ್ ಮತ್ರು ಬಿಜೆಪಿಯನ್ನು ಒಂದೇ ರೀತಿ ವಿರೋಧಿಸುತ್ತೇವೆ. ಎಸ್‌ಡಿಪಿಐ ಬಡವರ, ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮಾಡುತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ತಿರಸ್ಕರಿಸಿ ಜನರು ಪರ್ಯಾಯ ರಾಜಕಾರಣದ ಬಗ್ಗೆ ಯೋಚನೆ ಮಾಡಬೇಕು ಎಂದು ಅಬ್ದುಲ್ ಮಜೀದ್ ಹೇಳಿದರು.

ಕಳಂಜ ಘಟನೆ ಸುಳ್ಯಕ್ಕೆ ಕಪ್ಪು ಚುಕ್ಕೆ- ಶಾಫಿ ಬೆಳ್ಳಾರೆ:
ಕಳಂಜದಲ್ಲಿ ಅಮಾಯಕ ಯುವಕನನ್ನು ಗುಂಪು ಹತ್ಯೆ ಮಾಡಿರುವುದು ಸುಳ್ಯ ತಾಲೂಕಿಗೆ ಒಂದು‌ ಕಪ್ಪು ಚುಕ್ಕೆಯಾಗಿದೆ ಎಂದು ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಹೇಳಿದ್ದಾರೆ.
ಸುಳ್ಯದಲ್ಲಿ ಈ ರೀತಿಯ ಘಟನೆ ಈ ಹಿಂದೆ ನಡೆದಿಲ್ಲ. ಮುಂದೆ ನಡೆಯಲೂ ಬಾರದು. ಇದೊಂದು ವ್ಯವಸ್ಥಿತ ಸಂಚು ರೂಪಿಸಿ ಹತ್ಯೆ ಮಾಡಿದಂತಿದೆ. ಘಟನೆಯನ್ನು ನಾಗರೀಕ ಸಮಾಜ ಖಂಡಿಸಬೇಕು ಎಂದು ಅವರು ಘಟನೆ ನಡೆದ ಬಳಿಕ ಪೋಲೀಸ್ ಇಲಾಖೆ 8 ಆರೋಪಿ ಗಳನ್ನು ಬಂಧಿಸಿದ್ದಾರೆ. ಅದಕ್ಕಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಈ ಎಂಟು ಆರೋಪಿಗಳು ಕೂಡಾ ಆರ್.ಎಸ್.ಎಸ್. ಹಿನ್ನಲೆ ಉಳ್ಳವರು‌ ಮತ್ತು ಅವರಲ್ಲಿ ಮೂವರು ರೌಡಿ ಶೀಟರ್.‌ ಬೆಳ್ಳಾರೆ ಸುತ್ತಮುತ್ತಲಿನಲ್ಲಿ ಏನೇ ಘಟನೆ ಆದರೂ ಈ ಯುವಕರು ಅದರಲ್ಲಿ ಭಾಗಿಗಳೆಂಬ ಮಾಹಿತಿ ಇದೆ. ಈ ತಂಡಕ್ಕೆ ದ್ವೇಷ ತುಂಬಿ, ಪ್ರೋತ್ಸಾಹ ತುಂಬುವವರು ಯಾರೆಂದೂ ಕೂಡಾ ತನಿಖೆಯಿಂದ ಹೊರಬರಬೇಕು ಎಂದು ಹೇಳಿದರಲ್ಲದೆ ಘಟನೆಯ ಬಗ್ಗೆ ರಾಜಕೀಯ ಒತ್ತಡಕ್ಕೆ ಮಣಿಯದೆ ಪೋಲೀಸ್ ಇಲಾಖೆ ನಿಸ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಇಕ್ಬಾಲ್ ಬೆಳ್ಳಾರೆ, ಮಾತನಾಡಿ ಮಸೂದ್ ನ ಬೆನ್ನುಮೂಲೆ ಹಾಗೂ ಎದೆಯ ಭಾಗಕ್ಕೆ ಗುದ್ದಿದ ಗಾಯಗಳಿವೆ. ಸುಮಾರು 25 ರಷ್ಟು ಗಾಯಗಳು ದೇಹದಲ್ಲಿದೆ. ಬಂಧನವಾಗಿರುವ ಆರೋಪಿಗಳನ್ನು ಪೋಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕು. ಹಾಗೂ ಕೃತ್ಯ ಸಂದರ್ಭ ಬಳಸಿದ ವಾಹನವನ್ನು ಪೋಲೀಸರು ವಶ ಪಡೆಯಬೇಕೆಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಬ್ದುಲ್ ಕಲಾಂ, ರಫೀಕ್ ಎಂ.ಎಂ‌, ಮಸೂದ್ ಮಾವ ಹೈದರ್ ಕಳಂಜ, ಎಸ್.ಡಿ.ಪಿ.ಐ. ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.