ಮೃತ ಮಸೂದ್ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಟಿ.ಎಂ. ಶಹೀದ್ ಆಗ್ರಹ
ಕಳಂಜದಲ್ಲಿ ಯುವಕನ ಮೇಲೆ ಗುಂಪುಹಲ್ಲೆ ನಡೆದು ಆ ಯುವಕ ಮೃತಪಟ್ಟ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸುವುದರ ಜತೆಗೆ ಮೃತ ಮಸೂದ್ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ನೀಡಬೇಕು ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್ ಆಗ್ರಹಿಸಿದ್ದಾರೆ.
ಜು.21 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕೋಮು ಸೌಹಾರ್ದ ತೆ ಕೆಡಿಸುವ ಕೆಲಸ ಜಿಲ್ಲೆಯಲ್ಲಿ ಕೆಲವು ಸಂಘಟನೆಗಳಿಂದ ನಡೆಯುತ್ತಿದೆ. ಇದರಿಂದ ಅಮಾಯಕರು ಹಿಂದೂ – ಮುಸ್ಲಿಂ ಯುವಕರು ಬಲಿಯಾಗುತ್ತಿದ್ದಾರೆ. ಕಳಂಜದ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕು. ಕೋಮುವಾದ ಸಮಾಜಕ್ಕೆ ಮಾರಕ. ಮಸೂದ್ ಮೇಲಿನ ಗುಂಪು ಹಲ್ಕೆ ಮತ್ತು ಆತ ಮೃತ ಪಟ್ಟ ವಿಚಾರಕ್ಕೆ ಸಂಬಂಧಿಸಿ ಸಮಗ್ರ ತನಿಖೆ ಆಗಬೇಕು ಎಂದು ಹೇಳಿದ ಅವರು, ” ಶಿವಮೊಗ್ಗದ ಹರ್ಷ ಕೊಲೆಯಾದ ಸಂದರ್ಭ ಸರಕಾರ ಆ ಕುಟುಂಬಕ್ಕೆ ಪರಿಹಾರ ನೀಡಿದಂತೆ ಮಸೂದ್ ಕುಟುಂಬಕ್ಕೂ ರೂ.25 ಲಕ್ಷ ಪರಿಹಾರ ನೀಡಬೇಕೆಂದು ಸರಕಾರವನ್ನು ಆಗ್ರಹಿಸುತ್ತಿರುವುದಾಗಿ ಅವರು ಹೇಳಿದರು.
ಅಪಪ್ರಚಾರ ಬೇಡ : ಕಳಂಜದ ಘಟನೆಯ ಬಳಿಕ ಕಾಂಗ್ರೆಸ್ ಕುರಿತು ವಾಟ್ಸಾಪ್ ನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಮುಸ್ಲಿಂ ಮತಗಳನ್ನು ಒಡೆಯುವ ಷಡ್ಯಂತ್ರ. ಈ ಅಪಪ್ರಚಾರ ದಲ್ಲಿ ಎಸ್.ಡಿ.ಪಿ.ಐ. ಹಾಗೂ ಬಿಜೆಪಿ ಯವರ ಪಾತ್ರವೂ ಇದೆ ಎಂದು ಶಹೀದ್ ಹೇಳಿದರು.
“ಸಿದ್ಧರಾಮಯ್ಯ ಸರಕಾರ ರಾಜ್ಯದಲ್ಲಿದ್ದ ಸಂದರ್ಭ ಅಲ್ಪಸಂಖ್ಯಾತ ರಿಗೆ ಸಾಕಷ್ಟು ಕಾರ್ಯಕ್ರಮ ಗಳನ್ನು ನೀಡಿತ್ತು. ಆದರೆ ಬಿಜೆಪಿ ಸರಕಾರ ಬಂದ ಬಳಿಕ ಆ ಯೋಜನೆಗಳನ್ನು ರದ್ದುಗೊಳಿಸಿದೆ. ಈ ಕುರಿತು ಪಕ್ಷದೊಳಗೆ ನಮ್ಮ ಅಲ್ಪಸಂಖ್ಯಾತ ನಾಯಕರಿದ್ದು ಚರ್ಚೆಗಳು ನಡೆದಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಶಹೀದ್ ಉತ್ತರಿಸಿದರಲ್ಲದೆ, ಎಸ್.ಡಿ.ಪಿ. ಐ. ಯವರು ಪಕ್ಷ ಸಂಘಟನೆ ಮಾಡಲಿ. ಹಾಗಂದ ಮಾತ್ರಕ್ಕೆ ಕಾಂಗ್ರೆಸ್ ಗೆ ಮತ ಹಾಕಬಾರದೆಂದು ಹೇಳಿಕೊಂಡು ಕಾಂಗ್ರೆಸ್ ಮತ ಪಡೆದು ಬಿಜೆಪಿಯ ನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಇದೆಲ್ಲಾ ಚುನಾವಣೆ ಸಂದರ್ಭ ಎಸ್.ಡಿ.ಪಿ.ಐ. ಮತ್ತು ಬಿಜೆಪಿಯ ಒಳ ಒಪ್ಪಂದ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನ.ಪಂ.ಸದಸ್ಯ ಶರೀಫ್ ಕಂಠಿ, ಬ್ಲಾಕ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೊ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹನೀಫ್ ಬೀಜಕೊಚ್ಚಿ ಇದ್ದರು.