ಓರ್ವ ಅಂಗವಿಕಲ ಕೃಷಿಕ ಫಲಾನುಭವಿಗೆ ಸರಕಾರದಿಂದ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ದೊರೆಯಬೇಕಾದ ಸವಲತ್ತನ್ನು ಆತ ತನ್ನ ಪಕ್ಷದವನಲ್ಲ ಎಂಬ ಕಾರಣಕ್ಕಾಗಿ ಕಡತವನ್ನು ತಿರಸ್ಕರಿಸಿದ ಘಟನೆ ಸರಕಾರದ ಸಚಿವರ ನಡೆ ಪ್ರಜಾಪ್ರಭುತ್ವದ ಮೌಲ್ಯವನ್ನು
ಕಗ್ಗೊಲೆ ಮಾಡಿದಂತಾಗಿದೆ” ಎಂದು ಹೇಳಿರುವ ಆಮ್ ಆದ್ಮಿ ಪಕ್ಷ , ಘಟನೆಯನ್ನು ಖಂಡಿಸುವುದಾಗಿ ತಿಳಿಸಿದೆ.
” ರಾಜ್ಯಕ್ಕೆ ಯಾವುದೇ ಅಭಿವೃದ್ಧಿಯ ಕೊಡುಗೆ ನೀಡದೆ ಮಹಾ ಭ್ರಷ್ಟಾಚಾರದ ಕೊಂಪೆಯಲ್ಲಿ ಮುಳುಗಿ ಸರಕಾರ ಚಲಾಯಿಸಲು ಆಗದೆ ಇರುವಾಗ ಬಿಜೆಪಿ ಪಕ್ಷದ
ಈ ರೀತಿಯ ಓಟ್ ಬ್ಯಾಂಕ್ ರಾಜಕಾರಣ ತನ್ನ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ ಯಾಗಿದೆ. ಇನ್ನಾದರೂ ಜನತೆ ಬಿಜೆಪಿಯನ್ನು ಅರ್ಥಮಾಡಿಕೊಳ್ಳುವುದು ಒಳಿತು ” ಎಂದು ಆಮ್ ಆದ್ಮಿ ದ.ಕ ಜಿಲ್ಲೆ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ ತಿಳಿಸಿದ್ದಾರೆ.