ವಿದ್ಯಾರ್ಥಿಗಳನ್ನು ಅಭಿನಂದಿಸಿದ ಡಾ.ರೇಣುಕಾ ಪ್ರಸಾದ್ ಕೆ.ವಿ.
ಸಿ.ಬಿ.ಎಸ್.ಸಿ ಹತ್ತನೇತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಥಮ ಸ್ಥಾನ ಪಡೆದ ಶೇಖರ್ ಮತ್ತು ಪದ್ಮಿನಿ ದಂಪತಿಗಳ ಪುತ್ರ ಪ್ರಥಮ್ ಶೇಖರ್ ಮತ್ತು ದ್ವಿತೀಯ ಸ್ಥಾನ ಪಡೆದ ಧರ್ಮಪಾಲ ಮತ್ತು ಲತಾ ದಂಪತಿಗಳ ಪುತ್ರಿ ಮೋಕ್ಷಿತಾ ಕೆ. ಇವರನ್ನು ಅಕಾಡೆವಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಅವರ ಆಡಳಿತ ಕಛೇರಿಯಲ್ಲಿ ಅಭಿನಂದಿಸಿ ವಿದ್ಯಾರ್ಥಿಗಳಿಗೆ ರೂ.5೦೦೦ ಪ್ರೋತ್ಸಾಹಧನ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ಯು.ಜೆ, ಪ್ರಾಂಶುಪಾಲರಾದ ಅರುಣ್ಕುಮಾರ್, ಶೈಕ್ಷಣಿಕ ಸಂಯೋಜನಾಧಿಕಾರಿ ಶ್ರೀಮತಿ ಸುಜಾತ ಕಲ್ಲಾಜೆ, ಶಿಕ್ಷಕರಾದ ಪಲ್ಲವಿ, ಸುಜಿತ್, ಆಡಳಿತಾಧಿಕಾರಿ ತೃಪ್ತಿ ಗುತ್ತುಗದ್ದೆ ಮತ್ತು ಎ.ಒ.ಎಲ್.ಇ ಕಛೇರಿಯ ಆಡಳಿತಾಧಿಕಾರಿ ಪ್ರಸನ್ನಕುಮಾರ್ ಕಲ್ಲಾಜೆ ಉಪಸ್ಥಿತರಿದ್ದರು. 1೦ನೇ ತರಗತಿಯಲ್ಲಿ ಸತತ 9ನೇ ಬಾರಿ ಶೇ. 1೦೦ ಫಲಿತಾಂಶ ದಾಖಲಿಸಲು ಕಾರಣರಾದ ಶಾಲೆಯ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳನ್ನು ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ಅಭಿನಂದಿಸಿದರು.