ಇತ್ತೀಚೆಗೆ ತೀರಾ ಹದಗೆಟ್ಟಿರುವ ದುಗ್ಗಲಡ್ಕ- ಕೊಡಿಯಾಲಬೈಲು- ಜಟ್ಟಿಪಳ್ಳ ರಸ್ತೆಯನ್ನು ಸಚಿವರಾದ ಎಸ್. ಅಂಗಾರರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನ ಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಒರತೆ ಯಿಂದಾಗಿ ಹದಗೆಟ್ಟಿರುವ ರಸ್ತೆ ಪರಿಸ್ಥಿತಿ ವಿವರಿಸಿದರು. ಈಗಾಗಲೇ ಈ ರಸ್ತೆಗೆ 50ಲಕ್ಷ ಮಂಜೂರಾಗಿದ್ದು ಹದಗೆಟ್ಟಿರುವ ಸ್ಥಳಗಳಲ್ಲಿ ಕಾಂಕ್ರೀಟಿಕರಣ ನಡೆಸುವಂತೆ ಹಾಗೂ ಈ ರಸ್ತೆಗೆ ಇನ್ನಷ್ಟು ಅನುದಾನ ಒದಗಿಸುವುದಾಗಿ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ರಸ್ತೆಯ ಬದಿಯಲ್ಲಿ ಅತಿಕ್ರಮಣ ಮಾಡುವವರಿಗೆ ಹಾಗೂ ಜೆಸಿಬಿ ಮೂಲಕ ಬರೆ ನಿರ್ಮಿಸಿ ರಸ್ತೆಗೆ ಹಾನಿಉಂಟುಮಾಡುವವರಿಗೆ ನೋಟಿಸು ನೀಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಸಚಿವರು ಸೂಚಿಸಿದರು.ಈ ಸಂದರ್ಭದಲ್ಲಿ ನ ಪಂ ಸದಸ್ಯೆ ಶಶಿಕಲಾ ನೀರಬಿದಿರೆ, ಮಾಜಿ ನ ಪಂ ಅಧ್ಯಕ್ಷೆ ಶೀಲಾವತಿ, ಸ್ಥಳೀಯರಾದ ದಿನೇಶ್ ಮಣಿಯಾಣಿ, ಧನಂಜಯ ದುಗ್ಗಲಡ್ಕ, ಸುಬ್ರಹ್ಮಣ್ಯ, ಶಿವನ್ ಕಂದಡ್ಕ, ಶ್ರೀರಂಗ ಕಂದಡ್ಕ, ಲತೀಶ, ಜೋಕಿ ಮತ್ತಿತರರು ಉಪಸ್ಥಿತರಿದ್ದರು.