ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ಎನ್ಎಸ್ಎಸ್ ಘಟಕ,ಕಲಾ , ಕ್ರೀಡಾ ಮತ್ತು ಲಲಿತಾ ಕಲೆ ಸಂಘದ ನೇತೃತ್ವದಲ್ಲಿ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ನೇಜಿ ನಾಟಿಯ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮವನ್ನು ಅರಂತೋಡು ಪೂಜಾರಿ ಮನೆ ಗದ್ದೆಯಲ್ಲಿ ನಡೆಯಿತು.
ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಅರಿವು ಮೂಡಿಸಲು ಗದ್ದೆಯ ಯಾಜಮಾನ ಶ್ರೀ ಭರತ್ ಮತ್ತು ಮನೆಯವರು, ಕೃಷಿ ಕೆಲಸಗಾರರು ಜನಪದ ಹಾಡು, ಕುಣಿತದೊಂದಿಗೆ ಮಕ್ಕಳನ್ನೂ ರಂಜಿಸಿದರು.ಉಪನ್ಯಾಸಕರ ಪ್ರೋತ್ಸಾಹದಿಂದ ನೇಜಿ ನಾಟಿ ಮಾಡಿ ಸಂಭ್ರಮಿಸಿದರು. ಗದ್ದೆಯ ಮಣ್ಣಿನಲ್ಲಿ ಕುಣಿದು ಕುಪ್ಪಳಿಸಿ ಬಾಲ್ಯವನ್ನು ನೆನಪಿಸಿಕೊಂಡರು. ಪ್ರತಿ ದಿನ ಸೇವನೆ ಮಾಡುವ ಅನ್ನದ ಹುಟ್ಟು ತಿಳಿದು ವಿದ್ಯಾರ್ಥಿಗಳು ಮೂಕಸ್ಮಿತರಾದರು. ಕೃಷಿಯಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ದೈಹಿಕ ಮತ್ತು ಮಾನಸಿಕ ಶ್ರಮದ ಅಗತ್ಯವನ್ನೂ ವಿದ್ಯಾರ್ಥಿಗಳು ತಿಳಿದುಕೊಂಡರು.ಗದ್ದೆಯಲ್ಲಿ ದುಡಿದ ವಿದ್ಯಾರ್ಥಿಗಳಿಗೆ ಸಾಂಪ್ರಾದಾಯಿಕ ಚಾ,ನೆಲಕಡಲೆ ಉಂಡೆ ಚಿಕ್ಕಿ, ವಿವಿಧ ಬಗೆಯ ಸಿಹಿತಿನಿಸು ನೀಡಲಾಯಿತು. ಉಪನ್ಯಾಸಕರಾದ ಮೋಹನ್ ಚಂದ್ರ, ಪದ್ಮಕುಮಾರ್, ಶ್ರೀಮತಿ ನಂದಿನಿ, ಶ್ರೀಮತಿ ಶಾಂತಿ ಮತ್ತು ಶ್ರೀ ಕುಸುಮಾವತಿ ಮಾರ್ಗದರ್ಶನ ನೀಡಿದರು.