ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಳ್ಯದವರಿಗೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಭಡ್ತಿ ಜೊತೆಗೆ ವರ್ಗಾವಣೆಯಾಗಿದೆ.
1989 ರಲ್ಲಿ ಅರೆಸೇನಾ ಪಡೆಯಲ್ಲಿ ನಿಯುಕ್ತಿಗೊಂಡು ದೇಶದ ನಾನಾ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ. ಶ್ರೀಧರ್ ಅಜ್ಜಾವರ ಎ.ಎಸ್.ಜಿ ಚೆನ್ನೈಗೆ , ಹೇಮಕುಮಾರ್ ಚಿಲ್ತಡ್ಕ
ಎಲಿಮಲೆಯವರು ಎ.ಎಸ್.ಜಿ ಕಣ್ಣೂರಿಗೆ , ಲಿಂಗಪ್ಪ ಮೂಲ್ಯ ನೆಟ್ಟಾರ್ ರವರು ಡಿ.ಎ.ಇ ಕಲ್ಪಕಂ ಗೆ , ರವೀಂದ್ರ ಕುಮಾರ್ ಯು.ಎಂ ಮಂಡೆಕೋಲಿನ ಉಗ್ರಾಣಿಮನೆ ಮಾವಂಜಿಯವರು ಎನ್.ಐ.ಎಸ್.ಎ ಹೈದರಾಬಾದ್ ಗೆ ,ಆರ್ ಪ್ರಭಾಕರನ್ ಅಜ್ಜಾವರ ಮತ್ತು ಸಿ.ಎಸ್ ಪ್ರಭಾಕರ ಚೆಮ್ನೂರ್ ಐವರ್ನಾಡುರವರು ಎನ್.ಸಿ.ಪಿ ಕೈಗಾಗೆ ಪದೋನ್ನತಿಗೊಂಡು ವರ್ಗಾವಣೆಗೊಂಡವರು.