ಅಕಾಡೆಮಿ ಆಫ್ ಲಿಬರಲ್ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಅವರ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ವಿ.ಜಿ ವಿವಿದೋದ್ದೇಶ ಸೌಹಾರ್ದ ಸಹಕಾರಿಯಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ. ಉಜ್ವಲ್ ಊರುಬೈಲುರವರನ್ನು ಗೌರವಿಸಿ ಅಭಿನಂದಿಸಲಾಯಿತು.
ಜುಲೈ ೨೨ ರಂದು ನಡೆದ ಸಹಕಾರಿಯ ಮಾಸಿಕ ಸಭೆಯಲ್ಲಿ ಸಹಕಾರಿಯ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ಕೆ.ವಿ.ಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷರಾದ ಚಿದಾನಂದ ಗೌಡ ಬಾಳಿಲ ಸಹಕಾರಿಯ ನಿರ್ದೇಶಕರುಗಳಾದ ಭವಾನಿ ಶಂಕರ ಅಡ್ತಲೆ, ಪ್ರಸನ್ನ ಕಲ್ಲಾಜೆ, ದಯಾನಂದ ಅಟ್ಲೂರು, ಡಾ. ಮನೋಜ್ಕುಮಾರ್ ಅಡ್ಡಂತಡ್ಕ, ನಾಗೇಶ್ ಕೊಚ್ಚಿ ಸಹಕಾರಿಯ ಹಿರಿಯ ವ್ಯವಸ್ಥಾಪಕರಾದ ಅಂಕುಶ್ ಕುದ್ವ ಸಿಬ್ಬಂದಿಗಳಾದ ಅಶ್ವತ್, ಕರುಣಾಕರ ಮತ್ತು ಉದಯಕುಮಾರ್ ಉಪಸ್ಥಿತರಿದ್ದರು.