ಸೀಮೆ ಹುಲ್ಲು ಕಜೆಯಲ್ಲಿ ಬೆಟ್ಟ ಕುಸಿತ, ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಕೊಡಗು ಜಿಲ್ಲೆಯ ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಸುಮಾರು ಪ್ರದೇಶ ಗುಡ್ಡ ಕುಸಿತ ಉಂಟಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.
ಜುಲೈ ೨೨ರಂದು ರಾತ್ರಿ ೨ ಗಂಟೆ ಸಮಯದಲ್ಲಿ ಭಾರಿ ಶಬ್ಧದೊಂದಿಗೆ ಜಲ ಸ್ಫೋಟ ಉಂಟಾಗಿದ್ದು ಬೆಟ್ಟ ಕುಸಿಯಲು ಆರಂಭಿಸಿದೆ.
ಬೆಟ್ಟದ ಕೆಳಭಾಗದಲ್ಲಿ 15 ಮನೆಗಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.
ಮುಂಜಾಗ್ರತಾ ದೃಷ್ಟಿಯಿಂದ ಸ್ಥಳೀಯರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಘಟನಾ ಸ್ಥಳದ ಪರಿಸರಕ್ಕೆ ಜಿಲ್ಲಾ ವಿಪತ್ತು ಕೇಂದ್ರದ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಟ್ಟ ಜರಿದ ಒಂದು ಭಾಗವಷ್ಟೇ ಕಣ್ಣಿಗೆ ಗೋಚರಿಸುತ್ತಿದ್ದು ಅದರ ಮೂಲ ಸ್ಥಳಕ್ಕೆ ಹೋಗಲು ಕಷ್ಟ ಸಾಧ್ಯವಾಗಿದೆ ಎನ್ನಲಾಗಿದೆ.
ಇದು ಎಲ್ಲಿಂದು ಬಿರುಕು ಬಿಟ್ಟಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬರಬೇಕಾಗಿದೆ.