ಗುತ್ತಿಗಾರು ಸೊಸೈಟಿ ಕಾರ್ಯಕ್ರಮದಲ್ಲಿ ಡಾ. ಎಂ.ಎನ್.ರಾಜೇಂದ್ರ ಕುಮಾರ್
ರೈತರಿಗೆ ಕುಮ್ಕಿ ಹಕ್ಕು ಕೊಡಿ: ಸರಕಾರಕ್ಕೆ ಮನವಿ
ಈ ಭಾಗದಲ್ಲಿ ಕಾಣಿಸಿಕೊಂಡ ಅಡಿಕೆ ಹಳದಿ ರೋಗ ಸಂಶೋಧನಾ ಕಾರ್ಯಕ್ಕೆ ಯಡಿಯೂರಪ್ಪ ಸರಕಾರ 25 ಕೋಟಿ ಅನುದಾನ ನೀಡಿದೆ. ಸಂಶೋಧನ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ಒಂದು ಕೋಟಿ ರೂಪಾಯಿ ನೀಡಲು ಸಿದ್ದರಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಹೇಳಿದ್ದಾರೆ.
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ದೀನ್ ದಯಾಳ್ ರೈತ ಸಭಾ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರಿಗೆ ಸರಕಾರ ಕುಮ್ಕಿ ಹಕ್ಕು ನೀಡುವಂತೆ ಸಚಿವರನ್ನು ವಿನಂತಿಸಿದರು.
ಗುತ್ತಿಗಾರು ಸಹಕಾರಿ ಸಂಘದ ಕಾರ್ಯ ಚಟುವಟಿಕೆಗಳನ್ನು ಮಾದರಿ ಎಂದು ಶ್ಲಾಘಿಸಿದ ಡಾ.ಎಂ.ಎನ್. ಆರ್. ಅವರು, ನೂತನ ಸಭಾಭವನಕ್ಕೆ 10 ಲಕ್ಷ ನೀಡುವುದಾಗಿ ಘೋಷಿಸಿದರು. ಇಷ್ಟು ದೊಡ್ಡ ಹವಾನಿಯಂತ್ರಿತ ಸಭಾ ಭವನ ಬೇರೆ ಯಾವುದೇ ಸಂಘದಲ್ಲಿಲ್ಲ ಎಂದವರು ಹೇಳಿದರು.