ಪ್ರತಿಷ್ಠಿತ ಸಾಫ್ಟ್ ವೇರ್ ಸಂಸ್ಥೆಯಾದ ಹೆಚ್.ಪಿ. ಕಂಪೆನಿಯಲ್ಲಿ ಕಳೆದ 15 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಳ್ಯದ ಕಲ್ಕಳ ಮೋಹನ್ ಕೆ.ವಿ. ಯವರು ಗ್ಲೋಬಲ್ ಪ್ರೋಗ್ರಾಂ ಮ್ಯಾನೇಜರ್ ಆಗಿ ಭಡ್ತಿ ಪಡೆದು ಅಮೇರಿಕಾದ ಕ್ಯಾಲಿಫೋರ್ನಿಯಕ್ಕೆ ತೆರಳಿದ್ದಾರೆ.
ಸುಳ್ಯದ ಕಾಯರ್ತೋಡಿ ನಿವಾಸಿ, ಬ್ಯಾಂಕ್ ಅಧಿಕಾರಿಯಾಗಿದ್ದ ಕಲ್ಕಳ ಕೆ. ವಿ. ವೆಂಕಟರಮಣ ಮತ್ತು ಶ್ರೀಮತಿ ಹರಿಣಿ ದಂಪತಿಯ ಪುತ್ರರಾಗಿರುವ ಮೋಹನ್ ಕೆ.ವಿ.ಯವರು ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ನಲ್ಲಿ ಕಂಪ್ಯೂಟರ್ ಸೈನ್ಸ್ ಪದವೀಧರರಾಗಿ, ಬೆಂಗಳೂರು ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು 15 ವರ್ಷದ ಹಿಂದೆ ಎಚ್. ಪಿ. ಕಂಪೆನಿಗೆ ಸೇರಿದ್ದರು.
ಇವರ ಪತ್ನಿ ಪ್ರತಿಮಾ ರವರು ಭಾಗಮಂಡಲ ಬಲ್ಲಮಾವಟಿಯ ಕುದ್ಕುಳಿ ದಾಮೋದರ – ಶ್ರೀಮತಿ ರಾಧಾ ದಂಪತಿಯ ಪುತ್ರಿಯಾಗಿದ್ದು, ಪ್ರತಿಷ್ಠಿತ ಇಂಟೆಲ್ ಕಂಪನಿಯ ಉದ್ಯೋಗಿಯಾಗಿದ್ದು, ಆ ಕಂಪೆನಿಯಲ್ಲಿ ಸೀನಿಯರ್ ಡಿಸೈನ್ ಇಂಜಿನಿಯರ್ ಆಗಿ ಕ್ಯಾಲಿಫೋರ್ನಿಯಾದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇಬ್ಬರು ಮಕ್ಕಳಾದ ಅಪ್ಪಚ್ಚು ಮತ್ತು ಅಯಾನ್ ಜತೆಗೆ ಮೋಹನ್ – ಪ್ರತಿಮಾ ದಂಪತಿ ಜುಲೈ 24 ರಂದು ಅಮೇರಿಕಾದ ಕ್ಯಾಲಿಫೋರ್ನಿಯಕ್ಕೆ ತೆರಳಿದ್ದಾರೆ.