ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಜು.೨೩ರಂದು ನಡೆಯಿತು. ವಿದ್ಯಾರ್ಥಿ ನಾಯಕನಾಗಿ ದ್ವಿತೀಯ ವಾಣಿಜ್ಯ ವಿಭಾಗದ ಆದಿತ್ಯನ್ ಮತ್ತು ಉಪನಾಯಕನಾಗಿ ದ್ವಿತೀಯ ಕಲಾ ವಿಭಾಗದ ಸಾತ್ವಿಕ್ ಪಿ.ವಿ. ಯವರು ಆಯ್ಕೆಯಾಗಿದ್ದಾರೆ. ಸಂಸ್ಥೆಯ ಸಮಾಜ ಶಾಸ್ತ್ರ ಉಪನ್ಯಾಸಕ ಶಿವರಾಮ ನಾಯ್ಕ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು. ಸಂಸ್ಥೆಯ ಪ್ರಾಂಶುಪಾಲ ಮೋಹನ್ ಗೌಡ ಬಿ.ಕೆ. ಫಲಿತಾಂಶ ಘೋಷಣೆ ಮಾಡಿದರು.