Breaking News

ಹರಿಹರ: ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಾಸಿಕ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸಂಜೀವಿನಿ ಮಾಸಿಕ ಸಭೆ & ಮಾಹಿತಿ ಕಾರ್ಯಾಗಾರ ಜು.21 ರಂದು ‘ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಾಸಿಕ ಸಭೆಯು ಹರಿಹರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನೆರವೇರಿತು . ಸಭಾಧ್ಯಕ್ಷರಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಬಾಳುಗೋಡು ವಹಿಸಿದ್ದರು. ಶ್ರೀಮತಿ ಸವಿತಾ & ಕು ವಿದ್ಯಾ ಪ್ರಾರ್ಥನೆ ನೆರೆವೇರಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ NRLM ಸಂಜೀವಿನಿ ಸುಳ್ಯ ವಲಯದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತ , NREGA IEC ಕೋಆರ್ಡಿನೇಟರ್ ನಮಿತಾ, ಸಗ್ರಾ. ಪಂ. ಉಪಾಧ್ಯಕ್ಷ ವಿಜಯ ಅಂಝ
ಙಣ, ಪಿಡಿಒ ಮಣಿಯಾನ ಪುರುಷೋತ್ತಮ, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶರ್ಮಿಳಾ ಕೆ , ಪಂಚಾಯತ್ ಸದಸ್ಯೆ ಪದ್ಮಾವತಿ ಕಲ್ಲೇಮಟ ಇವರುಗಳು ಉಪಸ್ಥಿತರಿದ್ದರು . ಸಂಜೀವಿನಿ ಒಕ್ಕೂಟದ ಹರಿಹರ ಮತ್ತು ಬಾಳುಗೋಡಿನ ಸಂಘದ ಪದಾಧಿಕಾರಿಗಳು ಸದಸ್ಯೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು . TPM ಶ್ವೇತಾ ಇವರು ಸಂಜೀವಿನಿ ಸದಸ್ಯರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮತ್ತು ಸ್ವ ಉದ್ಯೋಗ ಮಾಡಿ ಮಹಿಳೆಯರು ಹೇಗೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬಹುದು ಎಂಬುದರ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ನಮಿತಾ ಸಂಜೀವಿನಿ ಸದಸ್ಯರಿಗೆ ನರೇಗಾದ ಕುರಿತು ಪ್ರೊಜೆಕ್ಟರ್ ಮೂಲಕ ಎಲ್ಲ ಮಾಹಿತಿಗಳನ್ನು ಹಂಚಿಕೊಂಡರು. ಪಿ ಡಿ ಒ ಅಮೃತ ಸ್ವಾತಂತ್ಯೋತ್ಸವದ ಪ್ರಯುಕ್ತ ‘ ಹರ್ ಘರ್ ತಿರಂಗಾ’ದ ಬಗ್ಗೆ GPLF ನಿಂದ ಧ್ವಜ ಹೋಲಿಯುವುದು ಮತ್ತು ಹಂಚಿಕೆ ಮಾಡುವುದು ಕುರಿತು ಮಾಹಿತಿ ನೀಡಿದರು . MBK ವೇದಾವತಿ ಕಲ್ಲೇಮಟ ಇವರು ಸ್ವಾಗತಿಸಿ ವಂದನಾರ್ಪಣೆಯನ್ನು ಮಾಡಿದರು . ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಸಖಿಗಳು MBK LCRP ಪಂಚಾಯತ್ ಸಿಬ್ಬಂದಿಗಳು ಸಭಾ ನಿರ್ವಹಣೆಯಲ್ಲಿ ಪಾಲ್ಗೊಂಡಿದ್ದರು ಕೊನೆಗೆ ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.