Breaking News

ಸರಕಾರ ಮಾಡದ ಕೆಲಸವನ್ನು ಸಹಕಾರಿ ಸಂಸ್ಥೆಗಳು ಮಾಡುತ್ತಿವೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಗುತ್ತಿಗಾರು ಸಂಘದ ಯಶಸ್ಸಿಗೆ ಇಲ್ಲಿನ ಒಗ್ಗಟ್ಟು ಕಾರಣ

ದೀನ ದಯಾಳ್ ಸಭಾಭವನ ಉದ್ಘಾಟಿಸಿ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್

ಸಹಕಾರ ಕ್ಷೇತ್ರವು ಇಂದು ಬೃಹದಾಕಾರವಾಗಿ ಬೆಳೆದಿದೆ. ಸಮಾಜವನ್ನು ಬೆಳೆಸುತ್ತಿದೆ. ಲಕ್ಷಾಂತರ ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ. ಅನೇಕ ಸಹಕಾರ ಸಂಘಗಳು ಸರಕಾರವೂ ಮಾಡದಂತಹ ಕೆಲಸವನ್ನು ಮಾಡುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

ಇಂದು ನಡೆದ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ದೀನ್‌ದಯಾಳ್ ಸಭಾಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಹಕಾರಿ ಸಚಿವರು ಒಗ್ಗಟ್ಟು ಮತ್ತು ಒಮ್ಮತದಿಂದ ಕಾರ್ಯ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ಗುತ್ತಿಗಾರು ಸಹಕಾರ ಸಂಘವೇ ಸಾಕ್ಷಿ. ರಾಜ್ಯದ ಉಳಿದ ಸಹಕಾರಿ ಸಂಘಗಳನ್ನು ಮೀರಿಸುವ ರೀತಿಯಲ್ಲಿ ಈ ಸಂಘ, ಇದರ ಭವ್ಯ ಕಟ್ಟಡ ಇದೆ ಎಂದು ಶ್ಲಾಘಿಸಿದರು.
ಸಹಕಾರ ಸಚಿವನಾಗುವುದಕ್ಕೂ ಮೊದಲು ನಾನು ವಿವಿಧ ಸಹಕಾರ ಸಂಘಗಳಲ್ಲಿ ಜವಾಬ್ದಾರಿ ನಿರ್ವಹಿಸಿದ್ದೇನೆ. ಆಗೆಲ್ಲಾ ಬಹಳ ಕಿರುಕುಳ ಅನುಭವಿಸಿದ್ದೇನೆ. ಆದರೆ ಅದೆಲ್ಲವನ್ನೂ ಎದುರಿಸಿದ್ದೇನೆ. ನಾನು ಸಚಿವನಾದ ಬಳಿಕ ಯಾವ ಸಂಸ್ಥೆಗೂ ಕಿರುಕುಳ ನೀಡಲು ಹೋಗಿಲ್ಲ. ಮಾತಾಡಿದ್ದೇನೆ. ಆದರೆ ತೊಂದರೆ ಕೊಡಲು ಹೋಗಿಲ್ಲ. ತಪ್ಪಿದ್ದರೆ ಸರಿಪಡಿಸಲು ಹೇಳಿದ್ದೇನೆ ಎಂದು ಸಚಿವರು ಹೇಳಿದರು.
ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ರೈತರ ಕೃಷಿ ಸಾಲಕ್ಕೆ 24 ಸಾವಿರ ಕೋಟಿ ಅನುದಾನ ಇರಿಸಿದ್ದಾರೆ. 33 ಲಕ್ಷ ಕೃಷಿಕರಿಗೆ ಈ ಪ್ರಯೋಜನ ಸಿಗಲಿದೆ. ಈಗಾಗಲೇ 6 ಕೋಟಿ ಸಾಲ ವಿತರಣೆಯಾಗಿದೆ ಎಂದ ಸಚಿವರು ಯಶಸ್ವಿನಿ ಯೋಜನೆ ಮರು ಜಾರಿಗೆ ಸರಕಾರ ನಿರ್ಧರಿಸಿದೆ ಎಂದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.