ಸುಳ್ಯ ಮುಖ್ಯ ರಸ್ತೆಯ ಖಾಸಗಿ ಬಸ್ ನಿಲ್ದಾಣದ ಬಳಿ ಬೈಕಿಗೆ ಅಟೋ ರಿಕ್ಷಾ ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ವರದಿಯಾಗಿದೆ.
ಶ್ರೀ ರಾಂ ಪೇಟೆಯಿಂದ ಗಾಂಧಿನಗರ ಕಡೆಗೆ ಸಂಚರಿಸುತ್ತಿದ್ದ ಬೈಕಿಗೆ ಖಾಸಗಿ ಬಸ್ ನಿಲ್ದಾಣದ ಎದುರುಗಡೆ ಎಡಗಡೆಯಿಂದ ವಿರುದ್ದ ದಿಕ್ಕಿಗೆ ರಿಕ್ಷಾ ತಿರುಗಿಸಿದಾಗ ಘಟನೆ ಸಂಭವಿಸಿದೆ.
ಪರಿಣಾಮ ಬೈಕ್ ಸವಾರನಿಗೆ ಗಾಯ ವಾಗಿದ್ದು ತಕ್ಷಣ ಸವಾರನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತೆಂದು ತಿಳಿದು ಬಂದಿದೆ. ಎರಡು ವಾಹನಗಳು ಜಖಂ ಗೊಂಡಿದೆ.