ಸುಳ್ಯ ಮೆಸ್ಕಾಂನ ಅರಂತೋಡು ಶಾಖೆಯಲ್ಲಿ ಓವರ್ ಸಿಯರ್ ಆಗಿರುವ ಜಯಪ್ರಕಾಶ್ ಕೆ, ಸುಬ್ರಹ್ಮಣ್ಯ ಶಾಖೆಯ ಓವರ್ ಸಿಯರ್ ಲೋಕೇಶ್ ಎ ಹಾಗೂ ಸುಳ್ಯ ಶಾಖೆಯಯಲ್ಲಿ ಓವರ್ ಸಿಯರ್ ಆಗಿದ್ದ ಶ್ರೀಮತಿ ಉಷಾ ಕುಮಾರಿಯವರಿಗೆ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಹುದ್ದೆಗೆ ಪದೋನ್ನತಿಗೊಂಡಿದ್ದಾರೆ.
ಪದೋನ್ನತಿಗೊಂಡಿರುವ ಜಯಪ್ರಕಾಶ್.ಕೆಯವರು ಬಂಟ್ವಾಳದ 110/33 ಕೆ.ವಿ ಕ.ವಿ.ಪ್ರ.ನಿ.ನಿ ಸ್ಟೇಶನ್ಗೆ ನಿಯುಕ್ತಿಗೊಂಡಿದ್ದಾರೆ.
ಇವರು ಪೆರ್ಲಂಪ್ಪಾಡಿ ಗ್ರಾಮದ ಕುದ್ಕುಳಿ ಮನೆ ಕೂಸಣ್ಣ ಗೌಡರ ಪುತ್ರರಾಗಿದ್ದು ಕುದ್ಕುಳಿ ಮನೆಯಲ್ಲಿ ವಾಸ್ತವ್ಯ ಹೊಂದಿರುತ್ತಾರೆ.
ಎ.ಲೋಕೇಶ್ ರವರು ಸುಬ್ರಹ್ಮಣ್ಯ ಉಪವಿಭಾಗದ ಗುತ್ತಿಗಾರು ಶಾಖೆಯಲ್ಲಿ ಪ್ರಬಾರ ಜೆ.ಇ ಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದೀಗ ಜೆ.ಇ ಯಾಗಿ ನಿಯುಕ್ತಿಗೊಂಡಿದ್ದಾರೆ.
ಇವರು ಬಳ್ಪ ಗ್ರಾಮದ ಎಣ್ಣೆಮಜಲು ರಾಮಣ್ಣ ಗೌಡರ ಪುತ್ರರಾಗಿದ್ದು ಪ್ರಸ್ತುತ ಎಣ್ಣೆಮಜಲಿನಲ್ಲಿ ವಾಸ್ತವ್ಯವಿರುತ್ತಾರೆ.
ಶ್ರೀಮತಿ ಉಷಾಕುಮಾರಿಯವರು ಸುಬ್ರಹ್ಮಣ್ಯ ಉಪವಿಭಾಗದ ಸುಬ್ರಹ್ಮಣ್ಯ ಸೇವಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ.
ಇವರು ಅರಂತೋಡು ತೊಡಿಕಾನ ಗ್ರಾಮದ ಆಜಡ್ಕ ಮನೆ ನೆಲ್ಲಿಂಬಾಡಿ ನಿವೃತ್ತ ಬಿ.ಎಸ್.ಎಫ್.ಯೋಧ ಎನ್.ಎಸ್.ಚಂದ್ರಶೇಖರ್ ಇವರ ಧರ್ಮಪತ್ನಿಯಾಗಿದ್ದು ಪ್ರಸ್ತುತ ಈಗ ಪರಿವಾರಕಾನ ಕೆ.ಎಸ್.ಆರ್.ಟಿ.ಸಿ ಡಿಪ್ಪೋದ ಹತ್ತಿರ ವಾಸ್ತವ್ಯ ಹೊಂದಿರುತ್ತಾರೆ.