ನಶಿಸಿ ಹೋಗುವ ನಮ್ಮ ಜಾನಪದ ಜ್ಞಾನ ಸಂಪತ್ತುಗಳನ್ನು ಉಳಿಸಿ ಹೊಸ ತಲೆಮಾರಿಗೆ ಪರಿಚಯಿಸುವ ಒಂದು ಅರ್ಥಪೂರ್ಣ ಕಾರ್ಯವನ್ನು ಅರೆಭಾಷೆ ಅಕಾಡೆಮಿ ಮಾಡುತ್ತಿದೆ. ಒಂದು ಎಂದು ಶಿಗ್ಗಾವಿ ಕರ್ನಾಟಕ ಜಾನಪದ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಹೇಳಿದರು.
ಅವರು ಸುಳ್ಯ ಸಮೀಪದ ಪೆರಾಜೆಯಲ್ಲಿ ಜು.23 ರಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಅರೆಭಾಷೆ ಪಾರಂಪರಿಕ ವಸ್ತು ಕೋಶ ಮತ್ತು ಇತರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಅವರು ಅಕಾಡೆಮಿ ವತಿಯಿಂದ ಪ್ರಕಡಿಸಿದ 8 ಕೃತಿಗಳನ್ನು ಬಿಡುಗಡೆ ಮಾಡಿದರು. ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮಾಧವ ಪೆರಾಜೆ ಕೃತಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಗೌಡ ಗ್ರಾಮ ಸಮಿತಿ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ ಭಾಗವಹಿಸಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಕೃತಿಕಾರರಾದ ಜಯಪ್ರಕಾಶ್ ಕುಕ್ಕೇಟಿ ( ಸಾಹೇಬ್ರ್ ಬಂದವೆ), ದೇವಜನ ಗೀತಾ ಮೋಂಟಡ್ಕ ( ಕಿರಗೂರಿಕ ಗಯ್ಯಾಳಿಗ), ದಾಮೋದರ ಕುಯಿಂತೋಡು( ನೆಂಪುನ ಒರ್ತೆ), ಪಿ.ಜಿ. ಅಂಬೆಕಲ್ಲು( ಗೂಡೆ ಬೇಕಾಗುಟು) ಭವಾನಿ ಶಂಕರ ಅಡ್ತಲೆ ( ಕತೆಗಳ ಅಟ್ಟುಳಿ) ಹಾಗೂ ಅಕಾಡೆಮಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಮಾಧವ ಪೆರಾಜೆ ಯವರ ವೀರಮಣಿ ಕಾಳಗ, ಭವ್ಯಶ್ರೀ ಕುಲ್ಕುಂದ ಅವರ ಯಕ್ಷ ಜೊಂಪೆ ಯಕ್ಷಗಾನ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ವಸ್ತು ಕೋಶ ರಚನೆಯಲ್ಲಿ ಸಹಕರಿಸಿದ ಕುಂಞೇಟಿ ಶಿವರಾಮ ಗೌಡ, ಎಂ.ಜಿ. ಕಜೆ, ಪಾರ್ವತಿ ಕೊಂಬಾರನ, ಬಾರಿಯಂಡ ಜೋಯಪ್ಪ, ಸುಬ್ರಹ್ಮಣ್ಯ ಮಾಸ್ತರ್ ಶಶಿ ಕೊಯಿಂಗೋಡಿ, ರಾಜೇಶ್ ದೇವರಕಾನ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಸ್ತುಕೋಶ ರಚನೆಯ ಸಂಯೋಜಕ ಜಯಪ್ರಕಾಶ್ ಮೋಂಟಡ್ಕ ಸ್ವಾಗತಿಸಿ,ಅಕಾಡೆಮಿ ಸದಸ್ಯರಾದ ಡಾ. ಪುರುಷೋತ್ತಮ ಕರಂಗಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ್ ಕುಂಬಳಚೇರಿ ವಂದಿಸಿ, ಎ. ಟಿ. ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.