Breaking News

ಕಳಂಜ : ಆಕಸ್ಮಿಕ ಬೆಂಕಿ ಅವಘಡ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಮಹಿಳೆ ಮೃತ್ಯು

ಆಕಸ್ಮಿಕವಾಗಿ ಬೆಂಕಿ ಅವಘಡದಿಂದ  ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ಕಳಂಜ ಗ್ರಾಮದ ಬಾಳೆಗುಡ್ಡೆ ಕುಂಞಣ್ಣ ನಾಯ್ಕರ ಪುತ್ರಿ ಕುಸುಮರವರು ಜು. 20ರಂದು ಬೆಳಿಗ್ಗೆ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೆನ್ನಲಾಗಿದೆ. ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಕೊನೆಯುಸಿರೆಳೆದರು.

ಅವರಿಗೆ 41 ವರ್ಷ  ವಯಸ್ಸಾಗಿತ್ತು.

ಮೃತರು ತಂದೆ ಸುಳ್ಯ ಲ್ಯಾಂಪ್ ಸೊಸೈಟಿಯ ಉಪಾಧ್ಯಕ್ಷ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ಕುಂಞಣ್ಣ ನಾಯ್ಕ ಬಾಳೆಗುಡ್ಡೆ, ಸಹೋದರರಾದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ಮತ್ತು ಸುಳ್ಯ ಲ್ಯಾಂಪ್ ಸೊಸೈಟಿ ನಿರ್ದೇಶಕ ಶುಭ ಕುಮಾರ್ ಬಾಳೆಗುಡ್ಡೆ, ಜಯಕುಮಾರ್ ಬಾಳೆಗುಡ್ಡೆ, ಸಹೋದರಿ ಶ್ರೀಮತಿ ಮಮತಾ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಜು. 24ರಂದು ನಡೆಯಲಿದೆಯೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.