ಅಲೆಟ್ಟಿ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಅಲೆಟ್ಟಿ ಸೊಸೈಟಿಯ ಮಾಜಿ ನಿರ್ದೇಶಕರಾಗಿದ್ದ ಬೆಳ್ಳಕುಂಞಿಗುಂಡ್ಯ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಗಣೇಶ್ ತೊಡಿಕ್ಕಾನರವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಶ್ರದ್ಧಾಂಜಲಿ ಸಭೆ ಜು.23 ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ. ಸಿ. ಜಯರಾಮರವರ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ದೇವಪ್ಪ ನಾಯ್ಕ ಬಡ್ಡಡ್ಕ, ಬಾಪೂಸಾಹೇಬ್ ಆರಂಬೂರು, ಭರತ್ ಮುಂಡೋಡಿ, ವಕೀಲರಾದ ಎಂ ವೆಂಕಪ್ಪ ಗೌಡ, ಗೀತಾ ಕೋಲ್ಚಾರು, ಮಾಧವ ಗೌಡ ಕಲ್ಲೆಂಬಿರವರು ಮೃತರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು. ಸಭೆಯಲ್ಲಿ ಪಕ್ಷದ ಮುಖಂಡರುಗಳಾದ ಪಿ. ಎಸ್. ಗಂಗಾಧರ, ನಂದರಾಜ್ ಸಂಕೇಶ, ಯೂಸುಫ್ ಅಂಜಿಕಾರು, ಸುಧೀರ್ ರೈ ಮೆನಾಲ, ಸತ್ಯಕುಮಾರ ಅಡಿಂಜ, ಧರ್ಮಪಾಲ ಕೊಯಿಂಗಾಜೆ,ಚಂದ್ರಕಾಂತ ನಾರ್ಕೋಡು, ಮೀನಾಕ್ಷಿ ಕುಡೆಕಲ್ಲು, ನಿಸಾರ್ ಪೈಂಬೆಚ್ಚಾಲು, ಗಣೇಶ್ ನಾಗಪಟ್ಟಣ, ಆನಂದ ನಾಗಪಟ್ಟಣ, ಗಂಗಾಧರ ಮೇನಾಲ, ಮೀನಾಕ್ಷಿ ಆರಂಬೂರು, ಜಯಂತಿ ಕೂಟೆಲು, ರಾಮಚಂದ್ರ ಬಡ್ಡಡ್ಕ, ಮೊದಲಾದವರು ಉಪಸ್ಥಿತರಿದ್ದರು.
ಮೃತರ ಗೌರವರ್ಥ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಸಂತಾಪ ಸಲ್ಲಿಸಲಾಯಿತು. ಚಂದ್ರಕಾಂತ ನಾರ್ಕೋಡು ಸ್ವಾಗತಿಸಿ ಸತ್ಯಕುಮಾರ ಅಡಿಂಜ ವಂದಿಸಿದರು.