ಅಲೆಟ್ಟಿ ಗ್ರಾಮದ ಪೈಂಬೆಚ್ಚಾಲು ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆಗೆ ಅಗತ್ಯವಾಗಿ ಬೇಕಿದ್ದ ಜೆರಾಕ್ಸ್ ಪ್ರಿಂಟಿಂಗ್ ಮೆಷಿನ್ನನ್ನು ಸ್ಥಳೀಯ ನಿವಾಸಿಗಳು ಕೇರಳದಲ್ಲಿ ದಂತ ಚಿಕಿತ್ಸಾಲಯ ನಡೆಸುತ್ತಿರುವ ದಂತ ವೈದ್ಯರಾದ ಡಾ. ಮಹಮ್ಮದ್ ಡಿ.ಎಂ. ರವರು ಕೊಡುಗೆಯಾಗಿ ನೀಡಿದ್ದು, ಇದರ ಹಸ್ತಾಂತರ ಕಾರ್ಯಕ್ರಮ ಜುಲೈ 23ರಂದು ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ಈ ಸಂದರ್ಭದಲ್ಲಿ ಮಾತನಾಡಿ ಶಾಲೆಗೆ ಅಗತ್ಯ ಬೇಕಾದ ಜೆರಾಕ್ಸ್ ಯಂತ್ರವನ್ನು ನೀಡಿ ಮಕ್ಕಳ ಕಲಿಕೆಗೆ ಸಹಕಾರಿಯಾದ ವೈದ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ಫೈಝಿ, ಗ್ರಾಮ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಎಸ್ಡಿಎಂಸಿ ಸದಸ್ಯರಾದ ವಕೀಲ ಮೂಸಾ ಪೈಂಬಚಾಲು ಪಿ.ಎಂ, ರಫೀಕ್ ಪಿ.ಎಂ, ರಜಾಕ್ ತೋಟಕೊಚ್ಚಿ, ಮೂಸ ದರ್ಕಾಸು, ಹಾರಿಶ್ ದರ್ಕಾಸು, ಹಸೈನಾರ್ ಪೈಂಬೆಚ್ಚಾಲು, ಸುಹೈಲ್, ಶಾಲಾ ಶಿಕ್ಷಕರು, ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.