Breaking News

ಸುಳ್ಯ ರೋಟರಿ ಸಿಟಿ ಕ್ಲಬ್ ಪದಗ್ರಹಣ ಸಮಾರಂಭ; ವಿದ್ಯಾಸಿರಿ ಯೋಜನೆಯಲ್ಲಿ ಕಂಪ್ಯೂಟರ್ ಕೊಡುಗೆ, ಆರೋಗ್ಯ ಸಿರಿ ಯೋಜನೆಗೂ ಚಾಲನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ರೋಟರಿ ಸಿಟಿ ಕ್ಲಬ್ ಇದರ 2022-23 ಸಾಲಿನ ಅಧ್ಯಕ್ಷರಾದ ಮುರಳೀಧರ ರೈ, ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ., ಕೋಶಾಧಿಕಾರಿ ನವೀನ್ ಚಂದ್ರರವರ ತಂಡದ ಪದಗ್ರಹಣ ಸಮಾರಂಭ ಜು.23 ರಂದು ಸುಳ್ಯ ರಥಬೀದಿಯಲ್ಲಿರುವ ರೋಟರಿ ಸಮುದಾಯ ಭವನದಲ್ಲಿ ನಡೆಯಿತು.ಸಮಾರಂಭದ ಆರಂಭದಲ್ಲಿ ಅಧ್ಯಕ್ಷತೆಯನ್ನು ರೋಟರಿ ಸಿಟಿ ಕ್ಲಬ್ ಅಧ್ಯಕ್ಷ ಪ್ರೀತಮ್ ಡಿ.ಕೆ. ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.


ಪದಗ್ರಹಣದ ಬಳಿಕ ನೂತನ ಅಧ್ಯಕ್ಷ ಮುರಳೀಧರ್ ರೈಯವರ ಅಧ್ಯಕ್ಷತೆಯಲ್ಲಿ ಸಭೆ ಮುಂದುವರಿಯಿತು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಪದಗ್ರಹಣ ನೆರವೇರಿಸಿದರು. ರೋಟರಿ ಜಿಲ್ಲಾ ಗವರ್ನರ್ ನಾಮಿನಿ ವಿಕ್ರಮ್ ದತ್ತ ಮುಖ್ಯ ಅತಿಥಿಗಳಾಗಿದ್ದರು.ವಲಯ ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೆಕಲ್, ಗವರ್ನರ್ ವಿಶೇಷ ಪ್ರತಿನಿಧಿ ಡಾ.ಕೇಶವ ಪಿ.ಕೆ ಅತಿಥಿಗಳಾಗಿದ್ದರು.ಶ್ರೀಮತಿ ದೇವಿಕಾ ಪ್ರೀತಮ್, ರೋಟರಿ ಸಿಟಿ ಕಾರ್ಯದರ್ಶಿ ಹೇಮಂತ್ ಕಾಮತ್, ಶ್ರೀಮತಿ ಮೀರಾ ವೇದಿಕೆಯಲ್ಲಿ ಇದ್ದರು.


ಆಲೆಟ್ಟಿ ಸದಾಶಿವ ದೇವಸ್ಥಾನದ ಅಧ್ಯಕ್ಷರಾಗಿ ಆಯ್ಕೆಯಾದ ರೋಟರಿ ಸಿಟಿ ಕ್ಲಬ್ ಮಾಜಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕರನ್ನು ಗೌರವಿಸಲಾಯಿತು. ಕೋಶಾಧಿಕಾರಿ ಗೌತಮ್ ಭಟ್ ವರದಿ ವಾಚಿಸಿದರು.
ರಂಜಿತ್ ಎನ್.ಆರ್., ಶ್ಯಾಮ್ ಭಟ್ ಅತಿಥಿಗಳನ್ನು ಪರಿಚಯಿಸಿದರು. ಭವಿನ್ ಸನ್ಮಾನಿತರನ್ನು ಪರಿಚಯಿಸಿದರು. ಮೂವರು ಹೊಸ ಸದಸ್ಯ ರಾಗಿ ಸಂಸ್ಥೆಗೆ ಸೇರ್ಪಡೆಯಾದರು. ವೈದ್ಯರ ದಿನಾಚರಣೆ ಪ್ರಯುಕ್ತ ಡಾ. ಕೇಶವ್ ಪಿ.ಕೆ.,ಡಾ. ಭರತ್ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು. ಐಡಿಯಲ್ ಭಾಸ್ಕರ್ ಹಾಗೂ ಡಾ.ರವಿ ಪರವ ಪರಮಲೆಯವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿಗೆ ಆಯ್ಕೆಯಾದ ಕ್ಲಬ್ ಸದಸ್ಯರನ್ನು ಗೌರವಿಸಲಾಯಿತು.
ನೂತನ ಅಧ್ಯಕ್ಷ ಮುರಳೀಧರ ರೈ ಪುತ್ರ ಅರ್ಜುನ್ ರೈಯವರು ಇನ್‌ಸ್ಪಯರ್ ಅವಾರ್ಡ್ ಸ್ಪರ್ಧೆಯಲ್ಲಿ ಗಳಿಸಿದ ಬಹುಮಾನದ ಮೊತ್ತ ರೂ. 10 ಸಾವಿರವನ್ನು ಇ ಲರ್ನಿಂಗ್ ಸ್ಕೂಲ್ ಯೋಜನೆಗೆ ಹಸ್ತಾಂತರ ಮಾಡಿದರು. ಆರೋಗ್ಯ ಸಿರಿ ಯೋಜನೆಯಲ್ಲಿ ಬಡ ರೋಗಿಯ ಚಿಕಿತ್ಸೆಗೆ ರೂ.25 ಸಾವಿರ ಆ ವ್ಯಕ್ತಿಯ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ನೂತನ ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ. ವಂದಿಸಿದರು. ಗಿರೀಶ್ ನಾಕೋಡ್ ಹಾಗೂ ಪ್ರಮೋದ್ ಕೆ. ಕಾರ್ಯಕ್ರಮ ನಿರೂಪಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.