Breaking News

ಖಾಸಗಿ ಏಜೆನ್ಸಿ ಮೂಲಕ ಅಡಿಕೆ ಹಳದಿ ರೋಗದ ಸಂಶೋಧನೆ; ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಪ್ರಕಟಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ನೆಲ್ಲೂರು ಕೆಮ್ರಾಜೆ ಸಹಕಾರ ಸಂಘದ ಸಭಾ ಭವನಕ್ಕೆ 10ಲಕ್ಷ ಘೋಷಣೆ

 

ಸುಳ್ಯ ತಾಲೂಕಿನ ಹಲವು ಭಾಗಗಳಲ್ಲಿ ಕಾಣಿಸಿಕೊಂಡ ಅಡಿಕೆ ಹಳದಿ ರೋಗದ ಸಂಶೋಧನೆಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಖಾಸಗಿ ಏಜೆನ್ಸಿ ಮೂಲಕ ನಡೆಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ಪ್ರಕಟಿಸಿದ್ದಾರೆ.

ನಿನ್ನೆಯಷ್ಟೇ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಹಳದಿ ರೋಗ ಸಂಶೋಧನೆಗೆ ಒಂದು ಕೋಟಿ ಅನುದಾನ ನೀಡುವುದಾಗಿ ಘೋಷಿಸಿದ್ದ ಡಾ.ಎಂ.ಎನ್.ಆರ್., ಇಂದು ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಸಮಾರಂಭದಲ್ಲಿ ಮಾತನಾಡಿ, ಹಳದಿ ರೋಗದ ಗಂಭೀರತೆಯ ಬಗ್ಗೆ ಅನೇಕ ಸಹಕಾರಿ ಸಂಘಗಳ ಅಧ್ಯಕ್ಷರು ನನ್ನ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಇದಕ್ಕೆ ಹಣದ ಮಿತಿ ಹಾಕುವುದಿಲ್ಲ. ಇದು ಹಣದ ಪ್ರಶ್ನೆಯಲ್ಲ, ಬದುಕಿನ ಪ್ರಶ್ನೆ. ಹೀಗಾಗಿ ನಮ್ಮ ಬ್ಯಾಂಕಿನ ಮೂಲಕವೇ ಖಾಸಗಿ ಏಜೆನ್ಸಿಯವರಿಂದ ಅಡಿಕೆ ಹಳದಿ ರೋಗದ ಸಂಶೋಧನೆ ನಡೆಸುವ ಚಿಂತನೆ ನಡೆಸಿದ್ದೇವೆ. ಮುಂದಿನ ಸಭೆಯಲ್ಲಿ ಈ ಕುರಿತು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಸುಳ್ಯಕ್ಕೆ ಒಳ್ಳೆಯ ದಿನಗಳು ಬರುತ್ತಿವೆ. ಎಲ್ಲ ಸಹಕಾರಿ ಸಂಘಗಳು ಸುಸಜ್ಜಿತ ಸಭಾಭವನ ಹೊಂದುತ್ತಿದೆ. ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘ ಅತ್ಯುತ್ತಮ ಕೆಲಸ ಮಾಡುತ್ತಿದೆ. ಇದರ ನೂತನ ಸಭಾಭವನಕ್ಕೆ 10 ಲಕ್ಷ ರೂಪಾಯಿ ನೀಡುತ್ತೇವೆ. ಮುಂದಿನ ವರ್ಷ ಈ ಸಂಸ್ಥೆ ೨೫ ವರ್ಷ ಪೂರೈಸುತ್ತಿದ್ದು, ಆ ಸಂದರ್ಭ ಸಭಾಭವನದ ಮತ್ತಷ್ಟು ವಿಸ್ತರಣೆಗೆ ಸಂಘ ಮುಂದಾಗಿದ್ದು, ಆಗಲೂ ನೆರವು ನೀಡುವುದಾಗಿ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.