ಇತ್ತೀಚೆಗೆ ಅಗಲಿದ ಜ್ಯೋತಿ ಇಂಡಸ್ಟ್ರೀಸ್ ಮಾಲಕ, ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಕನ್ನೆಜಾಲು ಜಗನ್ನಾಥ ರೈ ರವರಿಗೆ ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ವಿಷ್ಣು ಸರ್ಕಲ್ ಬಳಿ ಇರುವ ಸಂಘದ ಸಭಾಂಗಣದಲ್ಲಿ ಜು. 24ರಂದು ನಡೆಯಿತು.
ಜಗನ್ನಾಥ ರೈರವರು ಸಂಘದ ಮಾಜಿ ಅಧ್ಯಕ್ಷರಾಗಿ , ಪ್ರಸ್ತುತ ಉಪಾಧ್ಯಕ್ಷರಾಗಿ ಜ್ಯೋತಿ ಇಂಡಸ್ಟ್ರೀಸ್ ನಡೆಸುತ್ತಿದ್ದರು. ಅಧ್ಯಕ್ಷ ಎಂ. ಮಲ್ಲೇಶ್ ಬೆಟ್ಟಂಪಾಡಿ, ಕಾರ್ಯದರ್ಶಿ ಜನಾರ್ದನ ದೋಳ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಕೊಡಂಕೇರಿ, ಖಜಾಂಜಿ ಗೋಪಾಲ ನಡುಬೈಲು, ಸುದ್ದಿ ಬಿಡುಗಡೆ ವರದಿಗಾರ ವೆಂಕಟೇಶ್ ಮೇನಾಲ ರವರಗಳು ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ವತಿಯಿಂದ ಅಗಲಿದ ಸದಸ್ಯರಿಗೆ ಕೊಡಲ್ಪಡುವ ಮೋಕ್ಷ ನಿಧಿಯನ್ನು ಅವರ ಅಳಿಯ ಜ್ಯೋತಿ ಎಂಟರ್ ಪ್ರೈಸಸ್ ಮಾಲಕ ರಂಜನ್ ರೈವರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ವರದಿಗಾರ ಕೆ.ಟಿ. ಬಾಗೇಶ್ ಕೊಯ್ಕುಳಿ, ಉಪಾಧ್ಯಕ್ಷ ನಾರಾಯಣ ಆಚಾರ್ಯ ಪೈಚಾರು, ನಿರ್ದೇಶಕರರುಗಳಾದ ಶಾಂತಪ್ಪ ಡಿ.ಜಯನಗರ, ನಾಗೇಶ್ ಕೆರ್ಪಳ, ರಘುರಾಮ ಜಟ್ಟಿಪಳ್ಳ, ದಿನೇಶ್ ಬಾಚೋಡಿ, ಅಣ್ಣಿಪೂಜಾರಿ ಬೆಳ್ಳಾರೆ, ಅಬ್ದುಲ್ ಬಶೀರ್, ನವೀನ್ ಕುಮಾರ್ ಗುರುಂಪು, ಮದುಚಂದ್ರ ಪಂಜ, ಸದಸ್ಯರಗಳಾದ ಮೇದಪ್ಪ ಗುತ್ತಿಗಾರು, ಸುರೇಶ್ ಗುತ್ತಿಗಾರು, ವೆಂಕಟರಮಣ ಐ.ಡಿ., ಎನ್.ವೆಂಕಟರಮಣ , ಬಾಲಕೃಷ್ಣ, ನಿಶ್ಮಿತಾ , ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಸರ್ವಸದಸ್ಯರುಗಳು ಉಪಸ್ಥಿತರಿದ್ದರು.