ಜೆಸಿಐ ಸುಳ್ಯ ಸಿಟಿ ವತಿಯಿಂದ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯ ಮತ್ತು ಬ್ರದರ್ಸ್ ಬಳ್ಳಡ್ಕ ರವರ ಸಹಯೋಗದೊಂದಿಗೆ ಬಳ್ಳಡ್ಕಗದ್ದೆಯಲ್ಲಿ ಕೆಸರ್ಡ್ ಕಸರತ್ತ್ ಕ್ರೀಡಾಕೂಟ ಜು.೨೪ ರಂದು ನಡೆಯಿತು. ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಜೆಸಿಐ ಸುಳ್ಯ ಸಿಟಿ ಅಧ್ಯಕ್ಷ ಬಶೀರ್ ಯು.ಪಿ. ವಹಿಸಿದ್ದರು. ಶಿವರಾಮ ಬಳ್ಳಡ್ಕ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯರುಗಳಾದ ಹರೀಶ್ ರೈ ಉಬರಡ್ಕ, ಅನಿಲ್ ಬಳ್ಳಡ್ಕ, ಮಮತಾ ಕುದ್ಪಾಜೆ ಮತ್ತು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯದ ಅಧ್ಯಕ್ಷರಾದ ವಿನಯರಾಜ್ ಮಡ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ಶಿವರಾಮ ಸೂಂತೋಡುರವರನ್ನು ಸನ್ಮಾನಿಸಲಾಯಿತು. ಮನಮೋಹನ್ ಬಳ್ಳಡ್ಕ ರಂಜಿತ್ ಪಿಜೆ ಮತ್ತು ಪ್ರಜ್ವಲ್ ರವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಘಟಕದ ಕಾರ್ಯದರ್ಶಿ ಶಶಿಧರ್ ಎಕ್ಕಡ್ಕ ವಂದಿಸಿದರು.