Breaking News

ಸುಳ್ಯದಲ್ಲಿ ಕೆಂಪೇಗೌಡರ ಜನ್ಮ ದಿನಾಚರಣೆ: ಜಾಕೆ ಮಾಧವ ಗೌಡರಿಗೆ ಕೆಂಪೇಗೌಡ ಗೌಡ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ನಾಡಪ್ರಭು ಕೆಂಪೇಗೌಡರು ಸಮಾಜಕ್ಕೆ ನಿಡಿದ ಕೊಡುಗೆ ದೊಡ್ಡದು. ಅವರ ಅಭಿವೃದ್ಧಿ ಕಾರ್ಯ, ದೂರದೃಷ್ಠಿತ್ವ ಚಿಂತನೆ ಸದಾ ಪ್ರೇರಣಾದಾಯಿ. ಈ ನಿಟ್ಟಿನಲ್ಲಿ ಅವರ ಜಯಂತ್ಯೋತ್ವವವನ್ನು ಅದ್ದೂರಿಯಾಗಿ ಈ ಬಾರಿ ಎಲ್ಲ ಕಡೆಯಲ್ಲಿ ಮಾಡಬೇಕೆಂದು ನಿರ್ಣಯ ಮಾಡಿ, ಪ್ರತೀ ತಾಲೂಕಿಗೂ ಒಕ್ಕಲಿಗ ಸಂಘದಿಂದ ಅನುದಾನವನ್ನು ನೀಡಿವೆ. ಸುಳ್ಯದಲ್ಲಿ ಹಮ್ಮಿಕೊಂಡಿರುವ ಕಾರ್ಯ ಯಶಸ್ವಿಯಾಗಿದೆ” ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ. ಹೇಳಿದರು.
ಜು.24ರಂದು ಸುಳ್ಯದ ಕೊಡಿಯಾಲಬೈಲು ಗೌಡರ ಸಮಯದಾಯ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 513  ನೇ ಜಯಂತಿ ಆಚರಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
“ಈ ಬಾರಿ ಮೆಂಬರ್‌ಶಿಪ್ ಆನ್‌ ಲೈನ್‌ನಲ್ಲಿ ನೀಡಲಾಗುತ್ತದೆ. ರಾಜ್ಯ ಸಂಘದ ಸದಸ್ಯತ್ವಕ್ಕೆ 1600ಫೀಸ್ ಇದೆ. ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ ಅಪ್‌ಲೋಡ್ ಮಾಡಿ ಆನ್‌ಲೈನ್ ಮೂಲಕ ಸದಸ್ಯತನ ಪಡೆದುಕೊಳ್ಳಬಹುದು. ಈ ಕುರಿತು ಸದ್ಯದಲ್ಲೇ ಪತ್ರಿಕಾ ಪ್ರಕಟಣೆ ನೀಡಲಿವೆ. ಒಕ್ಕಲಿಗ ಸರ್ಟಿಫಿಕೇಟ್ ಇದ್ದರೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಶೇ.30   ರಿಯಾಯಿತಿ ಇದೆ” ಎಂದು ಹೇಳಿದರು.

ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕಿ ಶ್ರೀಮತಿ ವಾರಿಜಾ ಬೆಳ್ಯಪ್ಪ ಉಪನ್ಯಾಸ ನೀಡಿದರು.
ಪ್ರಶಸ್ತಿ ಪ್ರದಾನ : ಹಿರಿಯಸಹಕಾರಿ ದುರೀಣ, ಸಾಮಾಜಿಕ ಮುಂದಾಳು ಜಾಕೆ ಮಾಧವ ಗೌಡರಿಗೆ ತಾ. ಮಟ್ಟದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯಮಟ್ಟದ ಛಾಯಾ ಸಾಧಕ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಗೌಡರ ಯುವ ವೇದಿಕೆಯಿಂದ ರಾಜ್ಯ ಒಕ್ಕಲಿಗರ ಸಂಗದ ಉಪಾಧ್ಯಕ್ಷರನ್ನೂ ಸನ್ಮಾನಿಸಲಾಯಿತು.

ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಮುದಾಯ ಭವನ ಸಮಿತಿ ಅಧ್ಯಕ್ಷ ಎ.ವಿ. ತೀರ್ಥರಾಮ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮವೇದಿಕೆಯಲ್ಲಿದ್ದರು.
ಕೆಂಪೇಗೌಡ ಜಯಂತಿ ಪ್ರಯುಕ್ತ ಏರ್ಪಡಿಸಿದ ಸುಳ್ಯ ತಾಲೂಕು ವ್ಯಾಪ್ತಿಯ ಪ್ರೌಢಶಾಲಾ ವಿರ್ದ್ಯಾಥಿಗಳಿಗೆ ಕೆಂಪೇಗೌಡರು ಕುದುರೆ ಮೇಲೆ ಕುಳಿತಿರುವ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಪಿ.ಯು.ಸಿ. ಹಾಗೂ ತದನಂತರ ವಿದ್ಯಾರ್ಥಿಗಳಿಗೆ ಕೆಂಪೇಗೌಡರ ವ್ಯಕ್ತಿತ್ವ ಮತ್ತು ಬೆಂಗಳೂರು ಕಟ್ಟಿದ ಇತಿಹಾಸದ ಬಗ್ಗೆ ಪ್ರಬಂಧ ಸ್ಪರ್ಧೆಯವಿಜೇತರಿಗೆ ಬಹುಮಾನ ವಿತರಿಸಿದರು. ಗೌಡರ ಯುವ ಸೇವಾ ಸಂಘದ ಕೋಶಾಧಿಕಾರಿ ಚಂದ್ರಶೇಖರ ಮೇರ್ಕಜೆ, ಗೌಡರ ಯುವ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯಕ್ರಮ ಸಂಯೋಜಕ ವೀರಪ್ಪ ಗೌಡ ಕಣ್ಕಲ್ ಸ್ವಾಗತಿಸಿದರು.
ಎಂ.ಜಿ.ಎಂ ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ವೆಂಕಟರಮಣ ಕ್ರೆಡಿಟ್ ಕೋ ಆಪರಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಟಿ.ವಿಶ್ವನಾಥ್ ವಂದಿಸಿದರು. ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧಾ ವಿಜೇತರು: ಕೆಂಪೇ ಗೌಡರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ: ಕೃತಿ ಜಿ ರಾವ್ (ಎನ್‌ಎಂಪಿಯುಸಿ ಸುಳ್ಯ) ದ್ವಿತೀಯ ಸ್ಥಾನ ಸುದರ್ಶನ್ ಜಿ.ಎಂ.(ಸ.ಪ.ಪೂ.ಕಾಲೇಜು ಸುಳ್ಯ),ತೃತೀಯಸ್ಥಾನ ಕಾವ್ಯ.ಪಿ (ಪ್ರಥಮ ದರ್ಜೆ ಕಾಲೇಜು ಸುಳ್ಯ). ಸಮಾಧಾನಕರ ಬಹುಮಾನ:ದಿವ್ಯ ಜ್ಯೋತಿ (ಶಾರದಾ ಪಿ.ಯು. ಕಾಲೇಜು ಸುಳ್ಯ), ತೇಜಸ್ವಿನಿ (ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು) ಕೆಂಪೇ ಗೌಡರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ: ಪ್ರಣಮ್ಯ ಆಳ್ವ (ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ), ದ್ವಿತೀಯಸ್ಥಾನ: ಪೃಥ್ವಿ (ಕೆಪಿಎಸ್‌ಸಿ ಬೆಳ್ಳಾರೆ) ತೃತೀಯ ಸ್ಥಾನ: ಜಸ್ವಿತ್ (ಕುಮಾರಸ್ವಾಮಿ ಪ್ರೌಢ ಶಾಲೆ ಸುಬ್ರಹ್ಮಣ್ಯ),ಸಮಾಧಾನಕರ ಬಹುಮಾನ: ಜನನಿ ಯು.ಪಿ (ಸರಕಾರಿ ಪ್ರೌಢ ಶಾಲೆ ಮರ್ಕಂಜ),ನೇಹಾ (ಕೆ.ಎಸ್. ಗೌಡ ವಿದ್ಯಾ ಸಂಸ್ಥೆ ನಿಂತಿಕಲ್ಲು).

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.