ಅಂತರಾಜ್ಯ ರಸ್ತೆಗೂ ಕುಸಿತ ಭೀತಿ
ಕಲ್ಲಪ್ಪಳ್ಳಿ – ಬಾಟೋಳಿಯ ಕುಂಞಾಲಿ ಎಂಬವರ ತೋಟದಲ್ಲಿ ಭೂ ಕುಸಿತ ಉಂಡಾಗಿದೆ.
ಕಳೆದ ಎರಡು ವರ್ಷಗಳ ಮೊದಲು ಈ ಜಾಗದಿಂದ ಕೆಳಭಾಗದಲ್ಲಿ ಸುಮಾರು ಒಂದುವರೆ ಎಕರೆಯಷ್ಟು ಭೂಮಿ ಕುಸಿದಿತ್ತು. ಈ ಸಲ ಅದೇ ಜಾಗದಿಂದ ಮೇಲೆ ಸುಮಾರು ಎರಡೂವರೆ ಎಕರೆ ಜಾಗದಷ್ಟು ಭೂಮಿ ಕುಸಿತ ಉಂಟಾಗಿದೆ. ಭೂಮಿಯು ಸುಮಾರು ಒಂದೂವರೆ ಅಡಿಯಿಂದ ಎರಡು ಅಡಿಯಷ್ಟು ಕೆಳಕ್ಕೆ ಕುಸಿದು ನಿಂತಿದೆ.
ಪಾಣತ್ತೂರು-ಸುಳ್ಯ ಅಂತರ್ ರಾಜ್ಯ ರಸ್ತೆಯಿಂದ ಸುಮಾರು 10 ಮೀಟರ್ ನಷ್ಟು ದೂರದಲ್ಲಿ ಈ ಕುಸಿತ ಸಂಭವಿಸಿದೆ, ಹೀಗೆ ಕುಸಿತ ಮುಂದುವರೆದರೆ ಮುಂದೆ ಅಂತರಾಜ್ಯ ರಸ್ತೆ ಕುಸಿಯುವ ಭೀತಿಯಲ್ಲಿದೆ.