ಸುಳ್ಯದ ಯುವಕರೇ ನಿರ್ದೇಶಿಸಿ ನಿರ್ಮಾಣ ಮಾಡಿದ “ಮೌನ ಮಾತಾದಾಗ” ಎಂಬ ಹೆಸರಿನ ಕನ್ನಡ ಆಲ್ಬಂ ಸಾಂಗ್ ಇದರ ಬಿಡುಗಡೆ ಸಮಾರಂಭವು ಜು.24 ರಂದು ಸುಳ್ಯದ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಕನ್ನಡ ಚಿತ್ರ ನಟ ಆರ್ಯನ್, ಕನ್ನಡ ಸಿನಿಮಾ ನಿರ್ದೇಶಕ ಗೌರಿ ನಾಗೇಶ್ ಕೃಷ್ಣ , ನಿರೂಪಕ ವಿಜೆ ವಿಖ್ಯಾತ್ ಬಾರ್ಪಣೆ ,
ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ .ಆರ್ ರವರು ಆಲ್ಬಂ ಸಾಂಗನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಲ್ಬಮ್ ಸಾಂಗ್ ಗೆ ಪ್ರಶಾಂತ್ ವಿಟ್ಲರವರು ಸಾಹಿತ್ಯ ರಚಿಸಿದ್ದು ,ಯುವ ಗಾಯಕ ವಿಷ್ಣು ನಾಗ್ ಶೇಟ್ ಹಾಡಿದ್ದು, ಸುಳ್ಯದ ಪ್ರತಿಭೆ ಕೀರ್ತನ್ ಶೆಟ್ಟಿ ನಿರ್ದೇಶಿಸಿದ್ದಾರೆ. ಯಶ್ ಫೋಟೋಗ್ರಾಫಿ ಛಾಯಾಚಿತ್ರಗ್ರಾಹಕರಾಗಿ ಸಹಕರಿಸಿದ್ದಾರೆ. ಜೀವನ್ ಕೆರೆಮೂಲೆ ಹಾಗೂ ಗಿರೀಶ್ ರವರ ಸಂಕಲನದಲ್ಲಿ ಮೂಡಿ ಬಂದಿರುವ ಆಲ್ಬಮ್ ಸಾಂಗ್ (vishnunag shet you tube ) ಚಾನೆಲ್ ನಲ್ಲಿ ಲಭ್ಯವಿದ್ದು ಬಿಡುಗಡಗೊಂಡ ಕೆಲವೇ ಸಮಯದಲ್ಲಿ 2000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.