ಹರಿಹರಪಲ್ಲತಡ್ಕದ ದುಶ್ಯಂತ್ ಗೆ ಚಿನ್ನದ ಪದಕ
ಭಾರತ ಸರ್ಕಾರದ ವಾಕೋ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಮೂಲಕ ಕೋಲ್ಕತಾದಲ್ಲಿ 19/7/2022 ರಿಂದ 23/7/2022 ರ ವರೆಗೆ ಆಯೋಜಿಸಲ್ಪಟ್ಟಿದ್ದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ -32 ಕೆ.ಜಿ. ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಹರಿಹರಪಲ್ಲತಡ್ಕದ ದುಶ್ಯಂತ್ ಎಸ್. ಇವರು ಬಂಗಾರದ ಪದಕ ಪಡೆದಿದ್ದಾರೆ.
ಇವರು 11/6/2022 ರಿಂದ 12/6/2022 ರ ವರೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಇದೇ ವಿಭಾಗದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿ ಚಿನ್ನದ ಪದಕದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.
ಕಳೆದ ಏಳು ವರ್ಷಗಳಿಂದ ಐ.ಕೆ.ಎಂ.ಎ. ನ ತರಬೇತುದಾರರಾದ ಸೆನ್ಸಾಯೀ ನಿತಿನ್ ಸುವರ್ಣ ಹಾಗೂ ಸಂಪತ್ ಕುಮಾರ್ ರವರಿಂದ ಕರಾಟೆ, ಕಿಕ್ ಬಾಕ್ಸಿಂಗ್, ವುಷು ಹಾಗೂ ಬಾಕ್ಸಿಂಗ್ ಕ್ರೀಡೆಗಳ ತರಬೇತಿ ಪಡೆಯುತ್ತಿರುವ ದುಶ್ಯಂತ್ ಮಂಗಳೂರಿನಲ್ಲಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಪರಿವೀಕ್ಷಕರಾಗಿರುವ
ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕದ ಶ್ರೀಧರ ಎಸ್.ಪಿ. – ಪವಿತ್ರಾಕ್ಷಿ ದಂಪತಿಯ ಪುತ್ರ. ಪ್ರಸ್ತುತ ಪಣಂಬೂರು ಕೇಂದ್ರೀಯ ವಿದ್ಯಾಲಯದ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಈ ಹಿಂದೆ ಇದೇ ಕ್ರೀಡೆಯಲ್ಲಿ ಪೂನಾದಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಇದೇ ವರ್ಷದಲ್ಲಿ ನಡೆದ ಮಿನಿ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ವುಷು ಕ್ರೀಡೆಯಲ್ಲಿ ಕಂಚಿನ ಪದಕ ಪಡೆದಿದ್ದರು.