ಮನೆಯ ಛಾವಣಿಗೆ ಟಾರ್ಪಾಲು ಹಾಕಿ ತಾತ್ಕಾಲಿಕ ವ್ಯವಸ್ಥೆ
ಮರ್ಕಂಜ ದ ಗೋಳಿಯಡ್ಕ ಶುಶೀಲ ನಾಯ್ಕ ಅವರ ಮನೆ ಶಿಥಿಲವಸ್ಥೆಯಲ್ಲಿದ್ದು, ಶ್ರೀ ಶಾಸ್ತಾವು ಯುವಕ ಮಂಡಲದ ಸದಸ್ಯರು ಮನೆಗೆ ಟರ್ಪಾಲು ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.
ಸುಶೀಲ ನಾಯ್ಕರವರ ಮಗ ಶುಭಾಶ್ಚಂದ್ರರವರು ನಿಧನರಾದ ಬಳಿಕ ಮನೆಯ ಜವಾಬ್ದಾರಿ ಸುಶೀಲ ಮತ್ತು ಸೊಸೆ ಮೀನಾಕ್ಷಿಯವರ ಮೇಲಿತ್ತು. ಅಲ್ಲದೇ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಮನೆಯ ಖರ್ಚು ಇವರ ಹೆಗಲ ಮೇಲಿತ್ತು. ಮನೆಯಲ್ಲಿ ಬೇರೆ ಯಾವುದೇ ಆದಾಯದ ಮೂಲ ಇರದ ಕಾರಣ ಮನೆ ದುರಸ್ಥಿ ಕಂಡಿರಲಿಲ್ಲ. ಪರಿಣಾಮ ಮನೆ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಹೀಗಾಗಿ ಮನೆಯೊಳಗೆ ಮಳೆ ನೀರು ಬೀಳದಂತೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಉದ್ದೇಶದಿಂದ ಸ್ಥಳೀಯ ಕೆಲವರು ವಾಟ್ಸಪ್ ಗ್ರೂಪ್ ರಚಿಸಿ ಧನಸಂಗ್ರಹ ಕಾರ್ಯಕ್ಕೆ ಮುಂದಾದರು. ಈ ಬಗ್ಗೆ ವಿಷಯ ತಿಳಿದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲದ ಸದಸ್ಯರು ಯುವಕ ಮಂಡಲದ ವತಿಯಿಂದ ಟಾರ್ಪಾಲ್ ಹಾಕಿ ತಾತ್ಕಾಲಿಕ ವ್ಯವಸ್ಥೆ ಗೆ ಮುಂದಾದರಲ್ಲದೇ ಜು.24ರಂದು ಯು.ಮಂಡಲದ ಸದಸ್ಯರು ಸೇರಿ ಟಾರ್ಪಾಲು ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಸ್ತಾವು ಯುವಕಮಂಡಲದ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.