Breaking News

ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ ‘ಚೋಳು’

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ‘ಚೋಳು ಚೋಳು ಚೋಳು ಸಣಪಾ ಊರೆಲ್ಲಾ ಚೋಳು” ಅರೆಭಾಷೆ ಹಾಡೊಂದು ಬಹಳ ಜನಪ್ರಿಯವಾಗಿದ್ದು, ಸಿಕ್ಕಾ ಪಟ್ಟೆ ವೈರಲ್ ಆಗಿದೆ. ವಿಶೇಷವಾಗಿ ಪುಟ್ಟಮಕ್ಕಳನ್ನು ಸೆಳೆದಿದ್ದು ಎಲ್ಲರ ಬಾಯಲ್ಲೂ ಚೋಳು ಚೋಳು ಸಣಪ ಗುನುಗುಡುತ್ತಿದೆ.

ಎಲ್ಲರೂ ತಮ್ಮತಮ್ಮ ಸ್ಟೇಟಸ್‌ಗಳಲ್ಲಿ. ಮತ್ತೆ ಮತ್ತೆ ಈ ಹಾಡನ್ನು ಹಾಕಿ ಆನಂದಿಸುತ್ತಾ ಮಿಕ್ಕವರಿಗೆ ಕಳುಹಿಸುತ್ತಿದ್ದಾರೆ. ವಿಶೇಷವಾಗಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಇನ್ನು ಕೆಲವರು ಕೆಸರು ಗದ್ದೆಗಳಿಗಿಂತ ಕಡೆಯಾಗಿರುವ ತಮ್ಮ ರಸ್ತೆಗಳ ಚಿತ್ರಗಳಿಗೆ ಹಾಗೂ ವಿಡಿಯೋಗಳಿಗೆ ಈ ಹಾಡನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯದಲ್ಲಿ ಹರಿಬಿಡುತ್ತಿದ್ದಾರೆ.
ಅರೆಭಾಷೆ ಲೇಖಕಿ ಚಂದ್ರಾವತಿ ಬಡ್ಡಡ್ಕ ಬರೆದಿರುವ ಈ ಹಾಡನ್ನು ತೇಜು ಕೊಲ್ಲಮೊಗ್ರು ಸುಶ್ರಾವ್ಯವಾಗಿ ಹಾಡಿದ್ದಾರೆ. ತೇಜು ಅರೆಭಾಷೆಯಲ್ಲಿ ನೆಂಟ್ರು ಬಂದ ಗೌಜೀಲಿ, ಓ ಸಣಪ, ಉಗ್ಗವನ ಮುದ್ದುನ ಬಾಬೆ, ಕನ್ಸುನ ಗೂಡೆ, ಅರೆಭಾಷೆ ಹೈದ, ದೇವರ ದೀಪ, ಹೀಗೆ ಮಾತೃಭಾಷೆಯ ಒಲವಿನಿಂದ ಕವರ್ ಸಾಂಗ್ ಗಳನ್ನು ಮಾಡಿರುತ್ತಾರೆ. ಹಾಗೆಯೇ ತಮ್ಮದೇ ಊರಿನ ಜನರು, ಸ್ನೇಹಿತರು, ಹಾಗು ಮಕ್ಕಳನ್ನು ಜೊತೆ ಸೇರಿಸಿ ಸಾವಾಸ, ನೋ ಸ್ಮೋಕಿಂಗ್, ಸಿಂಪಲ್ಲಾಗ್ ಒಂದು ಸ್ವಚ್ಚ ಸ್ಟೋರಿ, ಮುಂದೆ Teju Topic ಯೂಟ್ಯೂಚಾನಲ್ ಅಲ್ಲಿ ಬಿಡುಗಡೆ ಆಗಲಿರುವ ಕೊತ್ತಲಿಂಗೆ ಬ್ಯಾಟ್ ಅನ್ನುವ ಕಿರುಚಿತ್ರವನ್ನು ಮಾಡಿರುತ್ತಾರೆ.
ಪ್ರತಿಯೊಬ್ಬರೂ ಅವರವರ ಮಾತೃಭಾಷೆಯಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ಮಾಡುವುದರಿಂದ ಅದುವೇ ನಾವು ಮಾತೃಭಾಷೆಗೆ ಕೊಡುವ ದೊಡ್ಡ ಉಡುಗೊರೆ ಎಂದು ತೇಜು ಹೇಳುತ್ತಾರೆ. ಇವರು ಮಂಗಳೂರಿನ ನಮ್ಮ ಟಿ.ವಿ. ಚಾನೆಲ್‌ನಲ್ಲಿ ಆಂಕರ್, ಸಂಕಲನಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೊಲ್ಲಮೊಗ್ರ ದೋಲನ ಮನೆ ಆನಂದ ಗೌಡ ಮತ್ತು
ಶ್ರೀಮತಿ ಇಂದಿರಾ ದಂಪತಿಗಳ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.