Breaking News

ಗೂನಡ್ಕದಲ್ಲಿ ಎಸ್ ಎಸ್ ಎಫ್ ದ.ಕ. ಈಸ್ಟ್ ಜಿಲ್ಲಾ ಕ್ಯಾಂಪಸ್ ಅಸೆಂಬ್ಲಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ನೇತೃತ್ವದಲ್ಲಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮವು ದ.ಕ ಜಿಲ್ಲೆ (ಈಸ್ಟ್) ವತಿಯಿಂದ ಜುಲೈ 24 ರಂದು ಸುಳ್ಯ ದ ಗೂನಡ್ಕ ಸಜ್ಜನ ಸಭಾಂಗಣ, ಬೀಜದಕಟ್ಟೆಯಲ್ಲಿ ನಡೆಯಿತು.

 

ನೈತಿಕತೆ, ಸಮಗ್ರತೆ, ಸಮರ್ಪಣೆ ಎಂಬ ಧ್ಯೇಯ ದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯ ಐದು ಡಿವಿಷನ್ ಗಳಿಂದ ಸುಮಾರು 1000 ಕ್ಕೂ ಅಧಿಕ ವಿದ್ಯಾರ್ಥಿ ಗಳು ಭಾಗವಹಿಸಿದ್ದರು.
ಬೆಳಿಗ್ಗೆ 7 ಗಂಟೆಗೆ ಪೇರಡ್ಕ ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮ ಚಾಲನೆ ನೀಡಿದರು. ಗೂನಡ್ಕ ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ಕೊಪ್ಪತಜೆ ಧ್ವಜಾರೋಹಣ ನೇರವರಿಸಿದರು.


ನಂತರ ನಡೆದ ಉದ್ಘಾಟನ ಸಮಾರಂಭದಲ್ಲಿ ಸಜ್ಜನ ಪ್ರತಿಷ್ಟಾನ ಬೀಜದಕಟ್ಟೆ ಇದರ ಅಧ್ಯಕ್ಷರಾದ ಡಾ. ಉಮರ್ ಬೀಜದಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಕೊಡಗು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಧ್ಯಾತ್ಮಿಕ ತರಗತಿ, ಮೋಟಿವೇಶನ್ ಕ್ಲಾಸ್, ಪ್ಯಾನೆಲ್ ಚರ್ಚೆ ಸೇರಿದಂತೆ ವಿವಿಧ ತರಗತಿಗಳನ್ನು ನೌಫಲ್ ಸಖಾಫಿ ಕಳಸ, ಸಿ.ಎನ್ ಜಾಫರ್ ಕಾಸರಗೋಡು, ಜಿ.ಎಂ ಕಾಮಿಲ್ ಸಖಾಫಿ ಉಸ್ತಾದ್, ಡಾ. ಸಿ‌ ಎಮ್ ಹನೀಫ್ ಬೆಳ್ಳಾರೆ, ರಖೀಬ್ ಮಾಸ್ಟರ್ ಕನ್ನಂಗಾರ್, ರಾಶಿದ್ ಬುಖಾರಿ ಕುಟ್ಯಾಡಿ ಮುಂತಾದ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿ ಮಾತನಾಡಿದರು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ರಾಜ್ಯ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ, ಬ್ರೈಟ್ ಇಬ್ರಾಹಿಂ ಹಾಜಿ, ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲಾನ ಶಾಫಿ ಸಾದಿ,ಸುಳ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಾಫ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ರಾಜ್ಯ ಕೋಶಾಧಿಕಾರಿ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕಾರ್ಯದರ್ಶಿ ಎನ್.ಸಿ ರಹೀಂ ಹೊಸ್ಮಾರ್, ಸದಸ್ಯರಾದ ಮುಜೀಬ್ ಕೊಂಡಂಗೇರಿ, ಉಮರಾ ನಾಯಕರಾದ ಯೂಸುಫ್ ಗೌಸಿಯಾ ಸಾಜ, ಇಬ್ರಾಹಿಂ ಹಾಜಿ ಕುಂಬಕ್ಕೋಡು, ಟಿ.ಎಂ ಶಹೀದ್ ತೆಕ್ಕಿಲ್, ಲತೀಫ್ ಅರ್ಲಡ್ಕ, ಮಹಮ್ಮದ್ ಕುಂಞಿ ಜೋಗಿಬೆಟ್ಟು, ಮುಸ್ತಫಾ ಕೋಡಪದವು, ಫಾರೂಕ್ ಇಂಜಿನಿಯರ್ ಬುಳೇರಿಕಟ್ಟೆ, ಕಲಂದರ್ ಕಬಕ KCF, ಸಿದ್ದೀಕ್ ಮಾಂಬ್ಲಿ ಒಮಾನ್, ನಝೀರ್ ನಾರ್ಶ, ಸಲಾಂ ಅಳಿಕೆ KCF, ಹಸನ್ ಮದನಿ ಮಂಡೆಕೋಲು, ಫೈಝಲ್ ಕಟ್ಟೆಕಾರ್ ,ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ,ಸದಸ್ಯರಾದ ಅಬೂಸಾಲಿ ಗೂನಡ್ಕ, ಸವಾದ್ ಗೂನಡ್ಕ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ ಎಸ್ ಉಮರ್, ಸುಳ್ಯ ಎಸ್.ವೈ.ಎಸ್ ಸೆಂಟರ್ ನಾಯಕರಾದ ಅಬ್ದುಲ್ ಲತೀಫ್ ಜೌಹರಿ, ಹಮೀದ್ ಬೀಜಕೊಚ್ಚಿ, ಸಿದ್ದೀಕ್ ಕಟ್ಟೆಕಾರ್,
ಸ್ಥಳೀಯ ಖತೀಬರಾದ ಮಹಮ್ಮದ್ ಅಲಿ ಸಖಾಫಿ ಮಾದಾಪುರಂ ಹಾಗೂ ಕೆಸಿಎಫ್ ನಾಯಕರು, ಎಸ್.ವೈ.ಎಸ್ ನಾಯಕರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಅಧ್ಯಕ್ಷರಾದ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಶ್ಫಾಕ್ ಕೊಡಂಗಾಯಿ ಸ್ವಾಗತಿಸಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಜಿಲ್ಲಾ ಕೊಶಾಧಿಕಾರಿ ಸಿದ್ದೀಕ್ ಗೂನಡ್ಕ ಸೇರಿದಂತೆ ಜಿಲ್ಲಾ ಕಾರ್ಯದರ್ಶಿ ಗಳು, ಕಾರ್ಯಕಾರಿ ಸಮಿತಿ ಸದಸ್ಯರು ವಿವಿಧ ವಿಷಯಗಳಲ್ಲಿ ಸಹಕರಿಸಿದರು. SSF ಸುಳ್ಯ ಡಿವಿಷನ್ ಸಮಿತಿ, ಸೆಕ್ಟರ್ ಸಮಿತಿ ಹಾಗೂ ಗೂನಡ್ಕ ಯುನಿಟ್ ಸಮಿತಿಯ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.