ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ಅದ್ಯಕ್ಷರಾದ ಮೌಲಾನಾ ಶಾಫಿ ಸಹದಿಯವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಸೀದಿ ದಫನ ಭೂಮಿಯ ತಕರಾರುಗಳ ಬಗ್ಗೆ
ಆಡಳಿತ ಮಂಡಳಿಯವರು ವಿವರಣೆ ನೀಡಿ
ಈಗಾಗಲೇ ತೀರಾ ಶಿಥಿಲವಾಗಿರುವ ಮಸೀದಿ ಮದ್ರಸಾ ಗಳಿಗೆ ವಕ್ಪ್ ಮಂಡಳಿಯಿಂದ ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಗೂನಡ್ಕ ಮಸೀದಿಗೆ ಈ ಹಿಂದೆ ನಾನು ಹಲವು ಬಾರಿ ಭೇಟಿ ನೀಡಿದ್ದೆ ಇದೊಂದು ಮತೀಯ ಸಾಮರಸ್ಯ ಸಾರುವ ನಾಡಾಗಿದೆ
ವರ್ಷಗಳ ಹಿಂದೆ ಮಸೀದಿಗೆ ಬೆಂಕಿ ತಗಲಿದ ಸಂದರ್ಬದಲ್ಲಿ ಊರಿನ ಹಿಂದು ಸಹೋದರರು ಬೆಂಕಿ ನಂದಿಸಿ ಮತೀಯ ಸೌಹಾರ್ದತೆ ಮೆರದದ್ದನ್ನು ಸ್ಮರಿಸಿಕೊಂಡರು. ಮಸೀದಿ ನಿರ್ಮಾಣಕ್ಕೆ ಡಾ:ಕೀಲಾರು ಗೋಪಾಲಕೃಷ್ಣಯ್ಯರವರು ಸ್ಥಳ ದಾನ ಮಾಡಿದ್ದನ್ನು ಉಲ್ಲೇಖಿಸಿ
ಇಲ್ಲಿನ ಸೌಹಾರ್ದತೆಗೆ ದಕ್ಕೆಯಾಗದಂತೆ ನಾಡಿನ ಸರ್ವರೂ ಪ್ರಯತ್ನಿಸಬೇಕು ಎಂದರು.
ಇಲ್ಲಿನ ಮಂದಿರ, ಮಸೀದಿ ಚರ್ಚ್ ಎಲ್ಲವು ಅಭಿವೃದ್ಧಿಯಾಗ ಬೇಕಾಗಿದೆ.ಆನಿಟ್ಟಿನಲ್ಲಿ ನಾವೆಲ್ಲರೂ ಪರಸ್ಪರ ಮತೀಯ ಸಾಮರಸ್ಯದೊಂದಿಗೆ ಇರಬೇಕು.
ಸೌಹಾರ್ದತೆ ಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಹೊರೆಗಿನ ಶಕ್ತಿ ಗಳನ್ನುಹೊರೆಗೆಯೇ ಇಡಬೇಕಾಗಿದೆಎಂದವರು ಹೇಳಿದರು.
ಈ ಸಂದರ್ಭದಲ್ಲಿ ಗೂನಡ್ಕ ಜಮಾಅತ್ ಅದ್ಯಕ್ಷರಾದ ಹಾಜಿ ಪಿ ಎ ಅಬ್ದುಲ್ಲಾ,ಪ್ರಧಾನ ಕಾರ್ಯದರ್ಶಿ ಉಮ್ಮರ್ ಪಿ ಎ, ಕೋಶಾದಿಕಾರಿ ಲತೀಪ್ ಸಖಾಫಿ, ಸುಳ್ಯ ಗಾಂಧಿನಗರ ಜಮಾಅತ್ ಅದ್ಯಕ್ಷರಾದ ಹಾಜಿ ಮುಸ್ತಪಾ,ದ ಕ ಜಿಲ್ಲಾ ವಕ್ಪ್ ಮಂಡಳಿ ಉಪಾಧ್ಯಕ್ಷರಾದ ಅಬ್ದುಲ್ ರಹಮಾನ್ ಮೊಗರ್ಪಣೆ,
ಕಾರ್ಯದರ್ಶಿ ಎಸ್ ಎ ಅಶ್ರಪ್.ಹಾರಿಸ್ ಕೆ ಎಸ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಪಿ ಕೆ ಅಬೂಶಾಲಿ ,ಸವಾದ್ ಗೂನಡ್ಕ,ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ,
ಎಸ್ ವೈ ಎಸ್ ಅದ್ಯಕ್ಷರಾದ ಹನೀಪ್ ಝೈನಿ ,ಎಸ್ ಎಸ್ ಎಫ್ ಅದ್ಯಕ್ಷರಾದ ಉನೈಸ್ ಗೂನಡ್ಕ ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಶಾಫಿ ಸಹದಿಯವರನ್ನು ಜಮಾಅತ್ ವತಿಯಿಂದ ಗಣ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.