ಕಳೆದ ವಾರ ಕಲ್ಲುಗುಂಡಿಯಲ್ಲಿ ಬೆಂಕಿಗಾಹುತಿಯಾದ ಸ್ಥಳಕ್ಕೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿ ಭೇಟಿ ಮಾಡಿದರು.
ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿರುವ ಮಹಮ್ಮದ್ ಕುಂಞಿ ರವರ ಮಾಲಕತ್ವದ ಕಟ್ಟಡವು ಕಳೆದ ವಾರ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಸುಟ್ಟು ಕರಕಲಾಗಿತ್ತು. ತನ್ನ ಜೀವನ ಮಾರ್ಗವಾಗಿದ್ದ ಎಲ್ಲವೂ ಸಂಪೂರ್ಣ ನಾಶವಾಗಿ ಹೋದ ಕಾರಣ ಸಂಕಷ್ಟದಲ್ಲಿರುವ ಮಹಮ್ಮದ್ ಕುಂಞಿ ಯವರಿಗೆ ಈವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ. ಈ ಬಗ್ಗೆ ವಕ್ಫ್ ಅಧ್ಯಕ್ಷರೊಂದಿಗೆ ದುಃಖವನ್ನು ತೋಡಿಕೊಂಡ ಮಹಮ್ಮದ್ ಕುಂಞಿ ಯವರಿಗೆ ವಕ್ಫ್ ಅಧ್ಯಕ್ಷರು ಸರ್ಕಾರದೊಂದಿಗೆ ಪರಿಹಾರಕ್ಕೆ ಶಿಫಾರಸು ಮಾಡುತ್ತೇನೆಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಸದಸ್ಯರಾದ ಅಬೂಸ್ವಾಲಿಹ್ ಗೂನಡ್ಕ, ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫ ಸುಳ್ಯ, ಜಿಲ್ಲಾ ವಕ್ಫ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮೊಗರ್ಪಣೆ, ಎ ಎಂ ಫೈಝಲ್ ಝುಹ್ರಿ, ಪತ್ರಕರ್ತರಾದ ಶರೀಫ್ ಜಟ್ಟಿಪಳ್ಳ, ಹನೀಫ ಚಟ್ಟೆಕಲ್ಲು, ಹನೀಫ್ ಕಡೆಪಾಲ, ರಫೀಕ್ ನೆಲ್ಲಿಕುಮೇರಿ, ಝಾಕಿರ್ ಕೊಯನಾಡು, ಸ್ವಾದಿಕ್ ಮಾಸ್ಟರ್, ಕಬೀರ್ ಜಟ್ಟಿಪಳ್ಳ ಹಾಗೂ ಸ್ಥಳದಲ್ಲಿ ಶ್ರಮದಾನ ಮಾಡುತ್ತಿದ್ದ ಸರ್ವ ಧರ್ಮದ ಹಲವು ನಾಗರಿಕರು ಉಪಸ್ಥಿತರಿದ್ದರು.