ಜು.16ರಂದು ರಂದು ಬೂಡು ವಾರ್ಡಿನ ಪಯಸ್ವಿನಿ ನದಿಗೆ ತೆರಳುವ ರಸ್ತೆಯು ಕಳೆದ 15 ದಿನಗಳಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿ ಸಂಪೂರ್ಣ ನಾಶವಾಗಿತ್ತು.
ಈ ಸಂದರ್ಭದಲ್ಲಿ ವಾರ್ಡಿನ ನಾಗರೀಕರು ಸ್ಥಳೀಯ ನಾಮ ನಿರ್ದೇಶಿತ ಸದಸ್ಯರಾದ ಬೂಡು ರಾಧಾಕೃಷ್ಣ ರೈಯವರ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ತುರ್ತಾಗಿ ಸ್ಪಂದಿಸಿದ ಬೂಡು ರಾಧಾಕೃಷ್ಣ ರೈಯವರು ತಾತ್ಕಾಲಿಕವಾಗಿ ರಸ್ತೆಯು ಉಪಯೋಗಕ್ಕೆ ಯೋಗ್ಯವಾಗುವ ರೀತಿಯಲ್ಲಿ ದುರಸ್ತಿ ಮಾಡುವಂತೆ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕರವರ ಗಮನಕ್ಕೆ ತಂದು ವಿನಂತಿಸಿದ ಮೇರೆಗೆ ನಗರ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಪರಿಶೀಲಿಸಿದ್ದು ದುರಸ್ತಿಯ ಬಗ್ಗೆ ಭರವಸೆಯನ್ನು ನೀಡಿರುತ್ತಾರೆ.