Breaking News

ಮರ್ಕಂಜ : ಮಿತ್ತಡ್ಕ ಶಾಲೆಯಲ್ಲಿ ವನಮಹೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಮಿತ್ತಡ್ಕ ಮರ್ಕಂಜ ಶಾಲೆಯಲ್ಲಿ ವನಮಹೋತ್ಸವ ಹಾಗೂ ಇನ್ ವರ್ಟರ್ ಕೊಡುಗೆ ಮತ್ತು ಕೈ ತೊಳೆಯುವ ಘಟಕದ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸಂಧ್ಯಾ ದೋಳ ವಹಿಸಿದ್ದರು.

ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಗುಂಡಿ‌ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಸುಮಾರು 70 ಸಾವಿರ ವೆಚ್ಚದಲ್ಲಿ  ಹೇಮಕುಮಾರ್ ಜೋಗಿಮೂಲೆಯವರು ಕೊಡುಗೆಯಾಗಿ ಮಾಡಿದ ಸುಸಜ್ಜಿತವಾಗಿ ನಿರ್ಮಾಣವಾದ ಕೈ ತೊಳೆಯುವ ಘಟಕವನ್ನು 4ನೇ ತರಗತಿ ವಿದ್ಯಾರ್ಥಿನಿ, 9ನೇ ವರ್ಷದ ಮಗಳ ಹುಟ್ಟು ಹಬ್ಬದ ದಿನದಂದು ಉದ್ಘಾಟಿಸಲಾಯಿತು. ‌
ಸಭಾ ಕಾರ್ಯಕ್ರಮದಲ್ಲಿ ಹೇಮಕುಮಾರ ದಂಪತಿಗಳನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹಾದೇವ ಎಸ್.ಪಿ. ಸನ್ಮಾನಿಸಿದರು. ವೇದಿಕೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಸಿದ್ಧಮಠ ದೇಶಕೋಡಿಯ ರಾಜೇಶನಾಥ ದೇಶಕೋಡಿ, ದೃಷ್ಠಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ‌ ಬಾಲಕೃಷ್ಣ ಭಟ್ ಕೊಡೆಂಕಿರಿ, ಗ್ರಾ.ಪಂ. ಸದಸ್ಯ ಯಶವಂತ ಸೂಟೆಗದ್ದೆ, ದತ್ತಿನಿಧಿ ದಾನಿಗಳಾದ ದಾಮೋದರ ಪಾಟಾಳಿ ಮಿತ್ತಡ್ಕ, ನಿವೃತ್ತಶಿ ಕ್ಷಕಿ ಶ್ರೀಮತಿ ತೀರ್ಥಕುಮಾರಿ, ಅರಣ್ಯ ವೀಕ್ಷಕ ಜಯಪ್ರಕಾಶ್ ಉಪಸ್ಥಿತರಿದ್ದರು.

ಮಂಗಳೂರಿನ ಡಾ| ಸುಧಾಕರ ಭಟ್ ರವರು ಶಾಲೆಗೆ ಕೊಡಮಾಡಿದ ಇನ್ವರ್ಟರ್ ನ್ನು ಬಾಲಕೃಷ್ಣ ಭಟ್ ಕೊಡೆಂಕೀರಿ ಹಸ್ತಾಂತರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ ಸ್ವಾಗತಿಸಿದರು. ಪೋಷಕರಾದ ನಿತ್ಯಾನಂದ ಭೀಮಗುಳಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.