ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಹಾಗೂ ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಇದರ ಸಹಯೋಗದಲ್ಲಿ
ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕಾ ಶಿಬಿರ ಜು.26 ರಂದು ನಡೆಯಲಿದೆ.
ಈ ಕೆಳಗಿನ ವೇಳಾಪಟ್ಟಿಯಂತೆ ಜರಗಲಿದ್ದು ಬೆಳಗ್ಗೆ ೧೦.೦೦ ರಿಂದ ೧೦.೩೦ ಸುಬ್ರಹ್ಮಣ್ಯ ದೇವರಗದ್ದೆ ಅಂಗನವಾಡಿ ಬಳಿ,
೧೦.೪೫ ರಿಂದ ೧೧.೦೦ ಸುಬ್ರಹ್ಮಣ್ಯ ಇಂಜಾಡಿ ಬಳಿ,
೧೧.೦೦ ರಿಂದ ೧೧.೩೦ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಛೇರಿ ವಠಾರದಲ್ಲಿ,
೧೧.೩೦ ರಿಂದ ೧೨.೦೦ ಸುಬ್ರಹ್ಮಣ್ಯ ಕುಮಾರಧಾರ ಬಳಿ,
೧೨.೦೦ ರಿಂದ ೧೨.೩೦ ಕುಲ್ಕುಂದ ಬಸ್ಸು ತಂಗುದಾಣ ಬಳಿ,
೧೨.೩೦ ರಿಂದ ೧.೦೦ ಪರ್ವತಮುಖಿ ಅಂಗನವಾಡಿ ಕೇಂದ್ರ ಬಳಿ,
೧.೦೦ ರಿಂದ ೧.೩೦ ಯೇನಕಲ್ಲು ಬಸ್ಸು ತಂಗುದಾಣ ಬಳಿ,
೧.೩೦ ರಿಂದ ೨.೦೦ ದೇವರಹಳ್ಳಿ ಅಂಗನವಾಡಿ ಕೇಂದ್ರ ಬಳಿ ಲಸಿಕಾ ವಿತರಣೆ ನಡೆಯಲಿದೆ. ನಾಯಿಗಳನ್ನು ಶಿಬಿರಕ್ಕೆ ಕರೆತಂದು ಲಸಿಕೆ ಹಾಕಿಸಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ನಾಯಿಯ ಮಾಲೀಕರ ಆಧಾರ್ ಸಂಖ್ಯೆ ಮೊಬೈಲ್ ಸಂಖ್ಯೆಯನ್ನು ಲಸಿಕಾ ಶಿಬಿರದಲ್ಲಿ ನೀಡುವಂತೆ ಕೋರಲಾಗಿದೆ.