ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ವತಿಯಿಂದ ಕೊ ಡಿಯಾಲ ಬೈಲು ಸರಕಾರಿ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯ ಕಟ್ಟಡ ಮತ್ತು ಕಾಂಪೌಂಡ್ ಉದ್ಘಾಟನಾ ಕಾರ್ಯಕ್ರಮ ಇಂದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಚಂದ್ರಕಲಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನರೇಗಾ ಯೋಜನಡಿಯಲ್ಲಿ 3,54,000 ರೂಗಳ ವೆಚ್ಚದಲ್ಲಿ ನಿರ್ಮಾಣವಾದ ಶಾಲಾ ಆವರಣ ಕಾಂಪೌಂಡನ್ನು ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಉದ್ಘಾಟಿಸಿದರು. ಇದೆ ವೇಳೆ ಸುಮಾರು ಮೂರು ಲಕ್ಷದ ಮೂವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶೌಚಾಲಯ ಕಟ್ಟಡವನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಾ ಪಾಲಡ್ಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ್ಲ, ಪಿ ಡಿ ಓ ವಿಧ್ಯಾದರ , ಗ್ರಾಮ ಪಂಚಾಯತ್ ಸದಸ್ಯರುಗಳಾದ ಹರೀಶ್ ರೈ ಉಬರಡ್ಕ, ಸಂದೀಪ್, ಮಮತಾ ಕುತ್ಪಾಜೆ, ಅನಿಲ್ ಬಳ್ಳಡ್ಕ, ಹಾಗೂ ಮುಖಂಡರುಗಳಾದ ಉಮೇಶ್ ಪಿಕೆ, ಸೋಮನಾಥ ಪೂಜಾರಿ, ರಾಧಾಕೃಷ್ಣ ಮಾಣಿಬೆಟ್ಟು, ಸಿ ಆರ್ ಪಿ ಭವಾನಿ ಶಂಕರ್, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರುಗಳಾದ ಪುರುಷೋತ್ತಮ, ಮಧು ಕಿರಣ್, ದಿಲೀಪ್ , ವಿಜಯಲಕ್ಷ್ಮಿ, ಶ್ರವಣ್, ಅಂಗನವಾಡಿ ಕಾರ್ಯಕರ್ತೆ ಸುಶೀಲ, ಸಹಾಯಕಿ ನಳಿನಿ, ಹಾಗೂ ಎಸ್ ಡಿ ಎಂ ಸಿ , ಸದಸ್ಯರುಗಳು, ವಿದ್ಯಾರ್ಥಿಗಳ ಪೋಷಕರು, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರುಗಳು, ಅತಿಥಿ ಶಿಕ್ಷಕಿ ವಿಜಯಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವರವರು ಉಪಸ್ಥಿತರಿದ್ದು, ವಿವಿಧ ದಾನಿಗಳಿಂದ ನೀಡಲ್ಪಟ್ಟ ಶಾಲಾ ಕಲಿಕಾ ಉಪಕರಣಗಳ ಹಸ್ತಾಂತರ ನಡೆಯಿತು.
ಸಂಸ್ಕೃತಿ ಸೇವಾ ಸಂಘದ ವತಿಯಿಂದ ಶಾಲೆಗೆ ಅಲ್ಮೆರಾ , ಸುರೇಶ್ ಕಮಿಲ ರವರು ನೀಡಲ್ಪಟ್ಟ ವಿದ್ಯಾರ್ಥಿಗಳಿಗೆ ಕೊಡೆ, ಪಿಕೆ ಉಮೇಶ್ ರವರಿಂದ ನೀಡಲ್ಪಟ್ಟ ಶಾಲಾ ಬ್ಯಾಗುಗಳು, ಗೋಪಾಲಕೃಷ್ಣ ಉಬರಡ್ಕ ರವರಿಂದ ಪ್ಲಾಸ್ಟಿಕ್ ಚೇರ್ಗಳು, ಮಧುಸೂದನ್ ಬೆಂಗಳೂರು ರವರಿಂದ ನೋಟ್ ಪುಸ್ತಕ, ನಾರಾಯಣ ವಿಜಯಲಕ್ಷ್ಮಿ ರವರಿಂದ ಐಡಿ ಕಾರ್ಡ್, ಸೋಮಯ್ಯ ಗೌಡ ಕುತ್ಪಾಜೆ ರವರಿಂದ ದತ್ತಿ ನಿಧಿ ಹಸ್ತಾಂತರ ಕಾರ್ಯಕ್ರಮಗಳು ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ಸವಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.